Vehicle Insurance Guide 2026: ವಾಹನ ವಿಮೆ ಕೊಳ್ಳುವ ಮುನ್ನ ಈ 6 ವಿಷಯ ಗೊತ್ತಿರಲಿ! ಕ್ಲೈಮ್ ಮಾಡುವುದು ಹೇಗೆ?

Vehicle Insurance

ನಮಸ್ಕಾರ ಕರ್ನಾಟಕ.

ಸ್ನೇಹಿತರೆ ನಮ್ಮ ದೇಶದಲ್ಲಿ ಮನುಷ್ಯರಿಗೆ ಇನ್ಶೂರೆನ್ಸ್ ಇರುತ್ತೋ ಬಿಡುತ್ತೋ ವಾಹನಗಳಿಗಂತೂ ಇದ್ದೇ ಇರುತ್ತೆ.

ಮನುಷ್ಯರು ಬಿದ್ದು ತಮ್ಮ ಕೈ ಕಾಲು ಕಿತ್ತು ಹೋದ್ರು ಕೂಡ ಪರವಾಗಿಲ್ಲ ಅದನ್ನ ಹಂಗೆ ದೂಳು ಹುಡುಕ್ತಾರೆ ಗಾಡಿಗೆ ಏನಾಯ್ತು ಅಂತ ಹೇಳಿ ಒಂದು ರೌಂಡ್ ಊರು ತುಂಬಾ ಹುಡುಕ್ತಾ ಇರ್ತಾರೆ.

ಅವರ ಲೆಕ್ಕಾಚಾರ ಗಾಯ ಗುಣ ಆಗುತ್ತೆ ಗಾಡಿ ಹೋದ್ರೆ ಏನು ಮಾಡ್ಲಿ ಅಂತ.

ಇಂತಹ ಸಂದರ್ಭದಲ್ಲಿ ಸ್ನೇಹಿತರೆ ಗಾಡಿಯ ಇನ್ಶೂರೆನ್ಸ್ ತುಂಬಾ ಇಂಪಾರ್ಟೆಂಟ್ ರೋಲ್ ನಿಭಾಯಿಸುತ್ತೆ.

ರೋಡಲ್ಲಿ ಪೊಲೀಸರು ಕೂಡ ಗಾಡಿ ಹಿಡಿದಾಗ ಗಾಡಿ ಓಡಿಸ್ತಾ ಇದಿಯಲ್ಲ ನಿನ್ನ ಹೆಲ್ತ್ ಇನ್ಶೂರೆನ್ಸ್ ಮಾಡ್ಸಿದ್ದೀಯಾ ಅಂತ ಕೇಳಲ್ಲ.

ಯಾವುದಾದರೂ ಬಿದ್ರೆ ಆಸ್ಪತ್ರೆಗೆ ನಿಂಗೆ ಮ್ಯಾನೇಜ್ ಆಗುತ್ತಾ ಅಂತ ಗಾಡಿದ ಇನ್ಶೂರೆನ್ಸ್ ಮಾಡ್ಸಿದ್ದೀಯಾ ತೆಗೆಯಪ್ಪ ಅಂತ ಕೇಳ್ತಾರೆ.

ಯಾಕಂದ್ರೆ ಗಾಡಿಗೆ ಇನ್ಶೂರೆನ್ಸ್ ಕಡ್ಡಾಯ ಗಾಡಿ ಇದೆ ಅಂದ್ರೆ ಇನ್ಶೂರೆನ್ಸ್ ಇರಲೇಬೇಕು.

ಆದರೆ ಹೊಸ ವಾಹನ ಖರೀದಿ ಮಾಡುವಾಗ ಅಥವಾ ಈಗಾಗಲೇ ಇರೋ ವಾಹನಗಳಿಗೆ ಇನ್ಶೂರೆನ್ಸ್ ಮಾಡಿಸೋ ಬಗ್ಗೆ ಕೆಲವಷ್ಟು ಜನಕ್ಕೆ ಕೆಲವೊಂದು ಗೊಂದಲ ಇರುತ್ತೆ.

ಇದರಲ್ಲಿ ಹಲವಾರು ಟೈಪ್ಸ್ ಇರೋದ್ರಿಂದ ಯಾವ ರೀತಿ ಇನ್ಶೂರೆನ್ಸ್ ಅನ್ನ ನಮ್ಮ ವೆಹಿಕಲ್ ಗೆ ತಗೋಬೇಕು ಅನ್ನೋ ಗೊಂದಲ ಇರುತ್ತೆ.

ವೆಹಿಕಲ್ ಅಥವಾ ಮೋಟಾರ್ ಇನ್ಶೂರೆನ್ಸ್ ಅಂದ್ರೆ ಏನು ಇದರ ಕ್ಲೈಮಿಂಗ್ ಪ್ರೊಸೀಜರ್ ಹೇಗಿರುತ್ತೆ ಇದಕ್ಕೆ ಸಂಬಂಧಪಟ್ಟ ಕಂಪ್ಲೀಟ್ ಮಾಹಿತಿಯನ್ನ ಈ ಲೇಖನದಲ್ಲಿ ಓದಿ.

ಗಾಡಿ ಬೈಕೋ ಅಥವಾ ಕಾರೋ ಈ ರೀತಿ ಮೋಟಾರ್ ವಾಹನ ಇರೋ ಪ್ರತಿಯೊಬ್ಬರು ಕೂಡ ತಿಳ್ಕೊಳ್ಳೇ ಬೇಕಾಗಿರೋ ಬೇಸಿಕ್ ಮಾಹಿತಿ ಇದು. ಇದು ಗೊತ್ತಿಲ್ಲ ಅಂದ್ರೆ ಬಹಳ ಕಷ್ಟ.


ವೆಹಿಕಲ್ ಇನ್ಶೂರೆನ್ಸ್.

ಸ್ನೇಹಿತರೆ ಜಗತ್ತಿನಲ್ಲಿ ತುಂಬಾ ಜನ ಎರಡು ಕಾಲಲ್ಲಿ ಓಡಾಡೋ ಬಾಡಿಗಿಂತ ಜಾಸ್ತಿ ಮಹತ್ವ ಕೊಡುವುದು ನಾಲ್ಕು ಚಕ್ರ ಅಥವಾ ಎರಡು ಚಕ್ರದ ಮೂಲಕ ಚಲಿಸುವ ಗಾಡಿಗೆ.

ಮುಖ್ಯವಾಗಿ ವೆಹಿಕಲ್ ಇನ್ಶೂರೆನ್ಸ್ ಯಾಕೆ ಮಾಡಿಸಬೇಕು ಅಂತ ನಾವು ಹೇಳೋದೇ ಬೇಡ.

ದೇಶದಲ್ಲಿ ಪ್ರತಿ ಮೂರು ನಿಮಿಷಕ್ಕೆ ಒಬ್ಬರು ರಸ್ತೆ ಅಪಘಾತದಲ್ಲಿ ಪ್ರಾಣ ಬಿಡ್ತಾ ಇದ್ದಾರೆ ಒಂದು ದಿನಕ್ಕೆ 462 ಜನ ರಸ್ತೆಗಳಲ್ಲಿ ಬಲಿಯಾಗ್ತಾ ಇದ್ದಾರೆ.

ಭಾರತದಲ್ಲಿ 2022 ರಲ್ಲಿ 4,50,000 ಅಪಘಾತಗಳು ನಡೆದಿದೆ 1,50,000 ಕ್ಕೂ ಅಧಿಕ ಜನ ಪ್ರಾಣ ಕಳ್ಕೊಂಡಿದ್ದಾರೆ.

ಆದರೆ ಗಾಯಗೊಂಡವರ ಪ್ರಮಾಣ ಇದರ ನಾಲ್ಕು ಪಟ್ಟು ಜಾಸ್ತಿ ಇದೆ.

ಇದರಲ್ಲಿ ಇನ್ವಾಲ್ವ್ ಆಗಿರೋ ಸಾವಿರಾರು ವಾಹನಗಳು ಮತ್ತೆ ಬಳಸೋಕೆ ಆಗದಷ್ಟು ಪುಡಿ ಪುಡಿನು ಆಗಿವೆ ಈ ಆರ್ಥಿಕ ಹೊಡೆತವನ್ನ ಅವಾಯ್ಡ್ ಮಾಡೋದಕ್ಕೆ ವೆಹಿಕಲ್ ಇನ್ಶೂರೆನ್ಸ್ ಬೇಕು.

ನಾಲ್ಕು ವಿಧದ ವಾಹನ ವಿಮೆ.


ಒಂದು ಥರ್ಡ್ ಪಾರ್ಟಿ ಇನ್ಶೂರೆನ್ಸ್, ಎರಡು ಕಾಂಪ್ರಹೆನ್ಸಿವ್ ಇನ್ಶೂರೆನ್ಸ್, ಮೂರು ಪೇ ಪರ್ ಯೂಸೇಜ್, ನಾಲ್ಕನೆಯದು ಓನ್ ಡ್ಯಾಮೇಜ್.

ಪೇ ಪರ್ ಯೂಸೇಜ್ ಅಂದ್ರೆ ವಾಹನಗಳ ಬಳಕೆಗೆ ತಕ್ಕ ಹಾಗೆ ಇನ್ಶೂರೆನ್ಸ್ ಮಾಡಿಸೋದು.

ಇದು ಇತ್ತೀಚಿಗೆ ಬಂದಿರೋ ಕಾನ್ಸೆಪ್ಟ್.

ಇನ್ನು ಓನ್ ಡ್ಯಾಮೇಜ್ ನಲ್ಲಿ ನಿಮ್ಮ ವಾಹನಕ್ಕೆ ನೀವು ಡ್ಯಾಮೇಜ್ ಮಾಡ್ಕೊಂಡ್ರೆ ಸೆಲ್ಫ್ ಆಕ್ಸಿಡೆಂಟ್ ಗಳಾದ್ರೆ ಕವರ್ ಆಗುತ್ತೆ.

ನೆಕ್ಸ್ಟ್ ಥರ್ಡ್ ಪಾರ್ಟಿ ಇನ್ಶೂರೆನ್ಸ್.

ಸ್ನೇಹಿತರೆ ಥರ್ಡ್ ಪಾರ್ಟಿ ಇನ್ಶೂರೆನ್ಸ್ ನಿಮ್ಮ ಜೊತೆಗೆ ಆಕ್ಸಿಡೆಂಟ್ ಆದವರ ಡ್ಯಾಮೇಜ್ ಗಳನ್ನ ಬರಿಸೋಕೆ ಬಳಕೆಯಾಗುತ್ತೆ.

ಉದಾಹರಣೆಗೆ ಯಾರಿಗಾದರೂ ಆಕ್ಸಿಡೆಂಟ್ ಆಯ್ತು ಅಂತ ಅನ್ಕೊಳ್ಳಿ ನಿಮಗೆ ಆಕ್ಸಿಡೆಂಟ್ ಆಯ್ತು ಅಂತ ಅನ್ಕೊಳ್ಳಿ ಬೇಡ ನಿಮಗೆ ಬೇಡ ನನಗೆ ಗಾಡಿಯಲ್ಲಿ ಹೋಗ್ತಾ ಇರ್ತೀನಿ ಆಕ್ಸಿಡೆಂಟ್ ಆಯ್ತು ಅಂತ ಅನ್ಕೊಳ್ಳಿ ಆಗ ನನ್ನ ಕಾರಿಗೂ ಬೈಕ್ ಗೂ ಯಾರಾದರೂ ಎದುರುಗಡೆ ಬಂದು ಗುದ್ದಿದ್ರೆ ಆ ಗುದ್ದಿದ ಥರ್ಡ್ ಪಾರ್ಟಿಗೆ ಒಂದಷ್ಟು ಡ್ಯಾಮೇಜ್ ಆಗಿರುತ್ತೆ.

ಆ ಡ್ಯಾಮೇಜ್ ಅನ್ನ ಸರಿ ಮಾಡಿಸೋ ಬರ್ಡನ್ ಅವರಿಗೆ ಗಾಯ ಆದ್ರೆ ಅಥವಾ ಏನಾದರೂ ಹೆಚ್ಚು ಕಮ್ಮಿಯಾಗಿ ತುಂಬಾ ದೊಡ್ಡದೇನಾದರೂ ಆಗಿಬಿಟ್ಟರೆ ಅದರ ಖರ್ಚುಗಳ ಬರ್ಡನ್ ನಿಮ್ಮ ಮೇಲೆ ಬರದೆ ಇರೋ ತರ ಈ ಇನ್ಶೂರೆನ್ಸ್ ನೋಡ್ಕೊಳ್ಳುತ್ತೆ.

ಈ ಇನ್ಶೂರೆನ್ಸ್ ನಮ್ಮ ದೇಶದಲ್ಲಿ ಕಡ್ಡಾಯ ಇದು ಪಾಪ್ಯುಲರ್ ಇನ್ಶೂರೆನ್ಸ್ ಅಲ್ಲ ಯಾಕಂದ್ರೆ ಇದು ನಿಮ್ಮ ವಾಹನದ ಡ್ಯಾಮೇಜ್ ಗಳನ್ನ ನಿಮ್ಮ ಇಂಜುರಿಯನ್ನ ಕವರ್ ಮಾಡಲ್ಲ ಕಡಿಮೆ ಹಣದಲ್ಲಿ ಸಿಗುತ್ತೆ ಅಂತ ಕೆಲವರು ಈ ಇನ್ಶೂರೆನ್ಸ್ ಖರೀದಿ ಮಾಡ್ತಾರೆ.

ಬಟ್ ಇದು ಮೋಟಾರ್ ಇನ್ಶೂರೆನ್ಸ್ ತಗೊಳ್ಳೋರಿಗೆ ಒಳ್ಳೆ ಆಪ್ಷನ್ ಅಲ್ಲ.

ಎದುರುಗಡೆ ಇರೋರಿಗೆ ನಮ್ಮಿಂದ ಬೇರೆಯವರಿಗೆ ಆದ್ರೆ ಅದರಿಂದ ಅವರಿಗೆ ಲಾಭ ಆಗುತ್ತೆ.

ಬಟ್ ಇದು ಕಂಪ್ಲೀಟ್ ಪ್ಯಾಕೇಜ್ ಅಲ್ಲ.

ಕಾಂಪ್ರಹೆನ್ಸಿವ್ ಇನ್ಶೂರೆನ್ಸ್.

ಸ್ನೇಹಿತರೆ ಕಾಂಪ್ರಹೆನ್ಸಿವ್ ಅರ್ಥಾನೇ ಎಲ್ಲವನ್ನು ಒಳಗೊಂಡ ಇನ್ಶೂರೆನ್ಸ್ ಅಂತ ಆಕ್ಸಿಡೆಂಟ್ ಮಾಡಿದವರು ಅದರಿಂದ ಹಾನಿಗೊಳಗಾದವರು ವಾಹನಗಳೆಲ್ಲವನ್ನ ಈ ಕಾಂಪ್ರಹೆನ್ಸಿವ್ ಇನ್ಶೂರೆನ್ಸ್ ಕವರ್ ಮಾಡುತ್ತೆ.

ನಿಮ್ಮ ಹಾಗೂ ಥರ್ಡ್ ಪಾರ್ಟಿಯ ಗಾಡಿ ಬಾಡಿ ಎಲ್ಲವನ್ನ ಕವರ್ ಮಾಡುತ್ತೆ ಅದರಿಂದ ಇದು ಮೋಸ್ಟ್ ಪಾಪ್ಯುಲರ್ ಮೋಟಾರ್ ಇನ್ಶೂರೆನ್ಸ್.

ಇನ್ನು ಎಷ್ಟೋ ಸಲ ಐದು ವರ್ಷದ ಟರ್ಮ್ ಇದ್ರೆ ಅದರಲ್ಲಿ ಮೂರು ವರ್ಷ ಕಾಂಪ್ರಹೆನ್ಸಿವ್ ಎರಡು ವರ್ಷ ಥರ್ಡ್ ಪಾರ್ಟಿ ಅಂತ ಆಪ್ಷನ್ ಇರುತ್ತೆ.

ಪಾಲಿಸಿ ತಗೊಳ್ಳುವಾಗ ಅದನ್ನ ಚೆಕ್ ಮಾಡ್ಕೋಬೇಕು.

Insured Depreciated Value.

ಸ್ನೇಹಿತರೆ ಇನ್ಶೂರೆನ್ಸ್ ಮಾಡಿಸೋ ಮುಂಚೆ ನೀವು ತಿಳ್ಕೋಬೇಕಾಗಿರೋದು ನಿಮ್ಮ ವಾಹನದ ವ್ಯಾಲ್ಯೂ.

ನೀವು ಒಂದು ಲಕ್ಷ ರೂಪಾಯಿಗೆ ಒಂದು ಟೂ ವೀಲರ್ ಅನ್ನೋ ಐದು ಲಕ್ಷ ಕೊಟ್ಟು ಒಂದು ಕಾರನ್ನ ಅಥವಾ ಇನ್ಯಾವುದೇ ವಾಹನವನ್ನ ಖರೀದಿ ಮಾಡಿರ್ತೀರಾ ಅಂತ ಅನ್ಕೊಳ್ಳಿ.

ಅದು ನೀವು ವಾಹನ ತಗೊಳ್ಳುವಾಗ ಇದ್ದ ಮೊತ್ತ ಶೋರೂಮ್ ನಿಂದ ನಿಮ್ಮ ವಾಹನ ಆಚೆ ಬರ್ತಿದ್ದ ಹಾಗೆ ಒಂದೆರಡು ಮೂರು ವರ್ಷ ಆಗ್ತಿದ್ದ ಹಾಗೆ ಆ ವಾಹನದ ಬೆಲೆ ಕೂಡ ಕಮ್ಮಿ ಆಗುತ್ತೆ.

ಅದನ್ನ ರಿಸೇಲ್ ವ್ಯಾಲ್ಯೂ ಅಂತ ಕೂಡ ಸಿಂಪಲ್ ಆಗಿ ಹೇಳಬಹುದು.

ನಿಮ್ಮ ವಾಹನಕ್ಕೆ ಒಂದೋ ಎರಡೋ ವರ್ಷ ಆದ್ಮೇಲೆ ನೀವು ಯಾವುದೋ ಕಾರಣಕ್ಕೆ ಇನ್ಶೂರೆನ್ಸ್ ಕ್ಲೈಮ್ ಮಾಡಬೇಕು ಅಂದ್ರೆ ಆಗ ನಿಮಗೆ ಶೋರೂಮ್ ನ ಬೆಲೆ ಅದಕ್ಕೆ ಸಿಗೋದಿಲ್ಲ ವಾಹನ ಹಳೆದಾಗ್ತೈಮ್ ನಲ್ಲಿ ಅದಕ್ಕೆ ಏನು ರೇಟ್ ಇರುತ್ತೋ ಅಷ್ಟು ಹಣವನ್ನ ಇನ್ಶೂರೆನ್ಸ್ ಕಂಪನಿಗಳು ನಿಮಗೆ ಕೊಡ್ತಾವೆ.

ಇದನ್ನೇ Insured Depreciated Value. ಅಥವಾ IDV ಅಂತಾರೆ.

ಎರಡು ವರ್ಷ ಆದ್ಮೇಲೆ ಐದು ಲಕ್ಷ ರೂಪಾಯಿ ಕಾರಿಗೆ ಮೂರು ಲಕ್ಷ ಕ್ಲೈಮ್ ಸಿಗಬಹುದು ಈ ವ್ಯಾಲ್ಯೂ ಅನ್ನ ಕಂಪನಿಗಳು ನಿಮ್ಮ ವಾಹನದ ಬ್ರಾಂಡ್, ಮಾಡೆಲ್, ತಯಾರಾದ ವರ್ಷ, ರಿಜಿಸ್ಟ್ರೇಷನ್ ಆಗಿರೋ ಸ್ಥಳದ ಆಧಾರದ ಮೇಲೆ ಕ್ಯಾಲ್ಕುಲೇಟ್ ಮಾಡ್ತಾರೆ ನಿಮ್ಮ ಇನ್ಶೂರೆನ್ಸ್ ನ ಪ್ರೀಮಿಯಂ ಡಿಸೈಡ್ ಆಗೋದು ಕೂಡ IDV ಮೇಲೆನೇ.


ಇನ್ಶೂರೆನ್ಸ್ ಯಾವಾಗ ಕ್ಲೈಮ್ ಆಗುತ್ತೆ?

ನಿಮ್ಮ ವಾಹನ ಕಳ್ಳತನ ಆದ್ರೆ ನೀವದನ್ನ ಕಳ್ಕೊಂಡ್ರೆ ಅಪಘಾತದಲ್ಲಿ ಡ್ಯಾಮೇಜ್ ಆದ್ರೆ ಬೆಂಕಿ ಬಿದ್ದು ಸುಟ್ಟು ಹೋದ್ರೆ ಸ್ಪೋಟ ಆದ್ರೆ ಪ್ರವಾಹನೋ ಇನ್ನೇನೋ ಬಂದು ಕುಚ್ಕೊಂಡು ಹೋದ್ರೆ ಪ್ರತಿಭಟನೆ ಮಾಡುವಾಗ ಯಾರೋ ಬೆಂಕಿ ಇಟ್ಟರೆ ಈ ರೀತಿ ನಿಮ್ಮ ವಾಹನಕ್ಕೆ ಇನ್ಶೂರೆನ್ಸ್ ಕವರೇಜ್ ಸಿಗುತ್ತೆ.

ಯಾವುದಕ್ಕೆ ಆಗಲ್ಲ ಅಂದ್ರೆ ವಾಹನಗಳ ಟೆಕ್ನಿಕಲ್ ಪ್ರಾಬ್ಲಮ್ ಗಳು ಹಲವು ವರ್ಷ ಓಡಿದ ಮೇಲೆ ಇಂಜಿನ್ ಪ್ರಾಬ್ಲಮ್ ಬರೋದು ಬ್ರೇಕ್ ಫೇಲ್ ಆಗೋದು ನಾರ್ಮಲ್ ವೇರಿಯಂಟ್ ನಾವು ಸರ್ವಿಸ್ ಮಾಡಿಸೋವಾಗ ಬರೋ ಖರ್ಚುಗಳೆಲ್ಲ ಇನ್ಶೂರೆನ್ಸ್ ಅಲ್ಲಿ ಕವರ್ ಆಗಲ್ಲ.

ವಾಹನ ಚಲಾಯಿಸ್ತಾ ಇದ್ದ ವ್ಯಕ್ತಿ ಬಳಿ ಡ್ರೈವಿಂಗ್ ಲೈಸೆನ್ಸ್ ಇಲ್ಲ ಅಂದ್ರೆ ಮದ್ಯಪಾನ ಮಾಡಿದ್ರು ಅಂದ್ರೆ ಆವಾಗ್ಲೂ ಕವರ್ ಆಗಲ್ಲ ನಿಮ್ಮ ಹಣೆಬರ ಅಂತ ಹೇಳ್ತಾರೆ.

ನೀವು ಶೋರೂಮ್ ಬಿಟ್ಟು ಹೊರಗೆ ಸರ್ವಿಸ್ ಮಾಡಿಸಿ ಅದರಿಂದ ವಾಹನದ ಒರಿಜಿನಲ್ ಪಾರ್ಟ್ ಗಳಿಗೆ ಸಮಸ್ಯೆ ಆಗಿದ್ರೆ ಅದರಿಂದ ಇಂಜಿನ್ ಆಯಿಲ್ ಲೀಕೇಜ್ ಸಮಸ್ಯೆ ಬಂದಿದ್ರೆ ಅದರಿಂದ ವಾಹನದ ವಾರಂಟಿ ಅಥವಾ ಗ್ಯಾರಂಟಿ ಕ್ಯಾನ್ಸಲ್ ಆಗಿದ್ರೆ ಆಗ್ಲೂ ಕೂಡ ಇನ್ಶೂರೆನ್ಸ್ ಗೆ ಪ್ರಾಬ್ಲಮ್ಸ್ ಆಗುತ್ತೆ.


ನಿಮ್ಮ ಇನ್ಶೂರೆನ್ಸ್ ನಲ್ಲಿ ಏನೇನು ಇರಬೇಕು?

ಸ್ನೇಹಿತರೆ ಹೆಲ್ತ್ ಇನ್ಶೂರೆನ್ಸ್ ರೀತಿ ವೆಹಿಕಲ್ ಇನ್ಶೂರೆನ್ಸ್ ನಲ್ಲೂ ಕೂಡ ಹಲವು ಉಪಯುಕ್ತ ಫೀಚರ್ ಗಳಿದೆ.

ಅದರಲ್ಲಿ ಮುಖ್ಯವಾಗಿ ಯಾವ ಫೀಚರ್ ಇದ್ರೆ ಒಳ್ಳೇದು ಅಂದ್ರೆ ಜೀರೋ ಡಿಪ್ರಿಸಿಯೇಷನ್ ಕವರ್.

ಸ್ನೇಹಿತರೆ ಹೆಚ್ಚಿನ ಮೋಟಾರ್ ಇನ್ಶೂರೆನ್ಸ್ ಪ್ಲಾನ್ ಗಳಲ್ಲಿ ಡಿಪ್ರಿಸಿಯೇಷನ್ ಕವರ್ ಇರುತ್ತೆ.

ಇದೇನಂದ್ರೆ ಅಪಘಾತದಿಂದಲೋ ಅಥವಾ ಇನ್ಯಾವುದೋ ಕಾರಣಕ್ಕೂ ಬಂದ ಖರ್ಚಿನಲ್ಲಿ ಒಂದಷ್ಟು ಹಣವನ್ನ ನಾವು ನಮ್ಮ ಕೈಯಿಂದ ಕೊಡೋದು.

ಉದಾಹರಣೆಗೆ ವಾಹನಕ್ಕೆ ಡ್ಯಾಮೇಜ್ ಆಗಿ 50,000 ರೂಪಾಯಿ ಖರ್ಚು ಮಾಡಬೇಕಾಗಿ ಬಂದ್ರೆ ಅದರಲ್ಲಿ 10,000 ರೂಪಾಯಿಯನ್ನ ನಿಮ್ಮ ಜೇಬಿನಿಂದ ಕಟ್ಟಬೇಕಾಗುತ್ತೆ.

ಇದನ್ನ ತಪ್ಪಿಸೋಕೆ ಜೀರೋ ಡಿಪ್ರಿಸಿಯೇಷನ್ ಕವರ್ ಇರೋ ಪ್ಲಾನ್ ತಗೊಂಡ್ರೆ ಒಳ್ಳೇದು ಇದರ ಪ್ರೀಮಿಯಂ ಸ್ವಲ್ಪ ಜಾಸ್ತಿ ಇರಬಹುದು ಬಟ್ ಖರ್ಚು ಬಂದಾಗ ಕಂಪನಿ ಪಾಲಿಸ್ಟು ನಿಮ್ಮ ಪಾಲಿಸ್ಟು ಅಂತ ಲೆಕ್ಕ ಹಾಕೋ ಕಷ್ಟ ತಪ್ಪುತ್ತೆ ಕಂಪ್ಲೀಟ್ ಹಣವನ್ನ ಇನ್ಶೂರೆನ್ಸ್ ಕಂಪನಿ ಪೇ ಮಾಡುತ್ತೆ.


ನಂಬರ್ ಟು ಇಂಜಿನ್ ಪ್ರೊಟೆಕ್ಷನ್.

ಸಾಮಾನ್ಯವಾಗಿ ಹೆಚ್ಚಿನ ಪಾಲಿಸಿಗಳಲ್ಲಿ ಇಂಜಿನ್ ಪ್ರೊಟೆಕ್ಷನ್ ಕವರ್ ಆಗಲ್ಲ ಆದರೆ ಇಂಜಿನ್ ವಾಹನದ ಇಂಪಾರ್ಟೆಂಟ್ ಪಾರ್ಟ್ ಇಂತಹ ಶೈನಿಂಗ್ ಗಾಡಿ ಇದ್ರೇನು.

ಅದನ್ನ ದೂಡುವ ಇಂಜಿನ್ನೇ ಸರಿ ಇಲ್ಲ ಅಂತ ಹೇಳಿದ್ರೆ ಹೀಗಾಗಿ ಈ ಆಪ್ಷನ್ ಇರೋ ಪ್ಲಾನ್ ತಗೊಳ್ಳೋದು ಉತ್ತಮ.

Next: No Claim Bonus.

ಈ ಆಪ್ಷನ್ ಹೆಲ್ತ್ ಇನ್ಶೂರೆನ್ಸ್ ಅಲ್ಲಿ ನೀವು ನೋಡಿರ್ತೀರಾ ವಾಹನಗಳ ಕೇಸ್ ನಲ್ಲಿ ಅವುಗಳ ಹೆಲ್ತ್ ಗಾಗಿ ಪಾಲಿಸಿ ನೀವು ಮಾಡಿಸೋದ್ರಿಂದ ವಾಹನಗಳಲ್ಲೂ ಕೂಡ ಅದೇ ರೀತಿ ಆಗಿರೋದ್ರಿಂದ ಇಲ್ಲೂ ಆಪ್ಷನ್ ಇದೆ.

ಅಂದ್ರೆ ನೀವು ಅವಧಿ ಮುಗಿಯೋವರೆಗೂ ಅಂದ್ರೆ ಬೇಸಿಕಲಿ ಒಂದು ವರ್ಷ ಕ್ಲೈಮ್ ಮಾಡ್ಲಿಲ್ಲ ಅಂದ್ರೆ ನೆಕ್ಸ್ಟ್ ನೀವು ರಿನ್ಯೂವಲ್ ಮಾಡಿಸುವಾಗ ನಿಮ್ಮ ಪ್ರೀಮಿಯಂ ಕಮ್ಮಿ ಆಗ್ಬೇಕು ಹೆಚ್ಚು ಅಂದ್ರೆ 50% ವರೆಗೂ ನಿಮಗೆ ಪ್ರೀಮಿಯಂ ಡಿಸ್ಕೌಂಟ್ ಸಿಗೋ ಸಾಧ್ಯತೆ ಇರುತ್ತೆ.


ಇನ್ಶೂರೆನ್ಸ್ ಕ್ಲೈಮ್ ಮಾಡೋದು ಹೇಗೆ?

ಇದು ಬಹಳ ಮುಖ್ಯ ಮೋಟಾರ್ ಇನ್ಶೂರೆನ್ಸ್ ಕ್ಲೈಮ್ ಮಾಡೋಕೆ ಆರು ಸ್ಟೆಪ್ಸ್ ಇವೆ.

ಒಂದು ನಿಮಗೆ ಪಾಲಿಸಿ ಕ್ಲೈಮ್ ಮಾಡೋ ಸಂದರ್ಭ ಬಂದ ತಕ್ಷಣ ನಿಮ್ಮ ಪಾಲಿಸಿ ಇರೋ ಕಂಪನಿಗೆ ಮಾಹಿತಿ ಕೊಡಬೇಕು ನಿಮ್ಮ ವಾಹನದ ಡ್ಯಾಮೇಜ್ ಬಗ್ಗೆ ಹೇಳಬೇಕು.

ಯಾವುದನ್ನು ಯಾವುದೇ ಕಾರಣಕ್ಕೂ ಮರೆಮಾಚಬಾರದು ಕಂಪನಿಗೆ ಇನ್ಶೂರೆನ್ಸ್ ಕ್ಲೈಮ್ ಫಾರ್ಮ್ ಸಬ್ಮಿಟ್ ಮಾಡಬೇಕು ಪೊಲೀಸ್ ಕಂಪ್ಲೇಂಟ್ ಕೊಡಬೇಕು ಎಫ್ಐಆರ್ ಫೈಲ್ ಮಾಡಬೇಕು ಆಕ್ಸಿಡೆಂಟ್ ಆದ್ರೆ ಕಂಪ್ಲೇಂಟ್ ಆಗೇ ಆಗುತ್ತೆ ಆದರೆ ವಾಹನ ಕಳುವಾಗೋದು ಅಂದ್ರೆ ನೀವಾಗೆ ಹೋಗಿ ದೂರು ಕೊಡಬೇಕು ಕದ್ದಿರೋ ಕಳ್ಳ ದೂರು ಕೊಟ್ಟು ನಿಮಗೆ ಹೆಲ್ಪ್ ಮಾಡಲ್ಲ.

NEXT ಆಕ್ಸಿಡೆಂಟ್ ಅಥವಾ ಇನ್ಯಾವುದೋ ಘಟನೆ ನಡೆದ ಸ್ಥಳದಲ್ಲಿ ಡ್ಯಾಮೇಜ್ ಆಗಿರೋ ವಾಹನದ ಫೋಟೋಗಳನ್ನ ತಗೋಬೇಕು ಪ್ರೂಫ್ ಗಾಗಿ ಎಷ್ಟಾಗುತ್ತೋ ಅಷ್ಟು ಫೋಟೋಗಳನ್ನ ವಿಡಿಯೋಗಳನ್ನ ಮಾಡಿ ಇಟ್ಕೋಬೇಕು ಇಲ್ಲ ಆಗಿದ್ದು ಇಂತ ಟೈಮ್ ನಲ್ಲಿ ಆಯ್ತು ಅಂತ.

ನೀವು ಸುಮ್ಮನೆ ರಿವರ್ಸ್ ತೆಗಿಬೇಕಾದ್ರೆ ಯಾವುದಕ್ಕೋ ದಡಾರ ಅಂತ ಗುದ್ದಿ Injured ಮಾಡ್ಕೊಂಡು ಹೋಗಿ ಆಮೇಲೆ ಇದು ಆಕ್ಸಿಡೆಂಟ್ ಆಯ್ತು ಅಂತ ಹೇಳಿದ್ರೆ ಎಲ್ಲಿ ಎಲ್ಲಿ ಆಯ್ತು ಯಾವ ಟೈಮ್ ನಲ್ಲಿ ಆಯ್ತು ಕಂಪ್ಲೇಂಟ್ ಕೊಟ್ರಾ ಅಂತ ಕೇಳ್ತಾರೆ ನೀವು ನಿಮ್ಮ ಪಾರ್ಕಿಂಗ್ ಅಲ್ಲಿ ರಿವರ್ಸ್ ಗುದ್ದಿ ಡ್ಯಾಮೇಜ್ ಮಾಡ್ಕೊಂಡ್ರೆ ಪೊಲೀಸ್ ಕಂಪ್ಲೇಂಟ್ ಕೊಡೋಕು ನಿಮಗೆ ಧೈರ್ಯ ಇರೋದಿಲ್ಲ ಅಲ್ವಾ.

ಆದರೆ ರೋಡಲ್ಲಿ ರಿಯಲ್ ಸೀನ್ ನಲ್ಲಿ ಟ್ರಾಫಿಕ್ ನಲ್ಲಿ ಯಾರೋ ಬಂದು ತಾಕ್ಸಿ ಹೋಗಿದ್ರೆ ಆ ಟೈಮ್ ನಲ್ಲಿ ಪೊಲೀಸ್ ಕಂಪ್ಲೇಂಟ್ ಕೊಡಬಹುದು ತಾಕ್ಸಿದವನ್ನ ಹಿಡ್ಕೊಂಡು ಬಂದು ವಾಪಸ್ ಅವನ ಹತ್ರ ವಸೂಲಿ ಮಾಡಕ್ಕೆ ಆಗುತ್ತೋ ಬಿಡುತ್ತೋ ಬೇರೆ ಪ್ರಶ್ನೆ ನಿಮಗೆ ಇನ್ಶೂರೆನ್ಸ್ ಸಿಗಬೇಕು ಅಂದ್ರೆ.

ಗಾಡಿ ನಿಲ್ಲಿಸಿ ಕೆಳಗೆ ಇಳಿದು ಫೋಟೋ ತೆಗೆಯಿರಿ ವಿಡಿಯೋ ಮಾಡಿ ಸುತ್ತ ಮುತ್ತಲ ಪರಿಸ್ಥಿತಿ ಕೂಡ ವಿಡಿಯೋ ಮಾಡ್ಕೊಳ್ಳಿ ಸಾಧ್ಯ ಆದ್ರೆ ಡಿಕ್ಕಿ ಹೊಡೆದು ಹೋಗ್ತಿರೋದು ಗಾಡಿದು ಕೂಡ ಫೋಟೋ ತಗೊಳ್ಳಿ ಸಾಧ್ಯ ಆದ್ರೆ ಬಟ್ ಗಾಡಿ ನಿಲ್ಲಿಸಿಬಿಟ್ಟು ಅಪಘಾತ ಆದ ತಕ್ಷಣ ಅದೇ ಕಂಡೀಷನ್ ನಲ್ಲಿ ಅದೇ ಲೊಕೇಶನ್ ನಲ್ಲಿ ಸುತ್ತಲು ಕವರ್ ಆಗೋ ರೀತಿ ಫೋಟೋ ತಗೊಂಡು ಇಟ್ಕೊಂಡಿರಿ.

ಆಮೇಲೆ ಕಂಪ್ಲೇಂಟ್ ಕೊಡಿ ಅದರ ಪರಿಣಾಮ ಕಂಪ್ಲೇಂಟ್ ಕಾಪಿ ಇಟ್ಕೊಂಡು ನೀವು ಇನ್ಶೂರೆನ್ಸ್ ಕ್ಲೈಮ್ ಮಾಡೋಕೆ ಹೋದಾಗ ಈಸಿಯಾಗಿ ಕ್ಲೈಮ್ ಆಗ್ಬಿಡುತ್ತೆ.

ನಂಬರ್ ಫೋರ್ ಇನ್ಶೂರೆನ್ಸ್ ಕಂಪನಿ ಕೇಳಿದ ಡಾಕ್ಯುಮೆಂಟ್ಸ್ ಅನ್ನ ಕೊಡಬೇಕು ಸಾಮಾನ್ಯವಾಗಿ ಕೇಸ್ ನ ಎಫ್ಐಆರ್ ಕಾಪಿ ಇನ್ಶೂರೆನ್ಸ್ ಪಾಲಿಸಿ ಕಾಪಿ ಗಾಡಿ ಓನರ್ ಲೈಸೆನ್ಸ್ ಕಾಪಿ ಆರ್ಸಿ ಕಾಪಿ ಕೊಡಬೇಕಾಗುತ್ತೆ.

ಇಲ್ಲಿ ನೀವು ನೆನಪಿಡಬೇಕಾಗಿರೋ ಪ್ರಮುಖ ವಿಚಾರ ಏನು ಅಂದ್ರೆ ನಿಮ್ಮ ಇನ್ಶೂರೆನ್ಸ್ ಅವಧಿ ಮುಗಿಯೋ ಒಳಗೆ ಲ್ಯಾಪ್ಸ್ ಆಗೋದ್ರ ಒಳಗ ಪ್ರೀಮಿಯಂ ಮತ್ತೆ ಕಟ್ಟೋದು ರಿನ್ಯೂವಲ್ ಮಾಡಿಸೋದು ಯಾಕಂದ್ರೆ ಲ್ಯಾಪ್ಸ್ ಆದ್ರೆ ಮತ್ತೆ ರಿನ್ಯೂವಲ್ ಮಾಡಿಸೋಕೆ ಹೆಚ್ಚಿನ ಪ್ರೀಮಿಯಂ ಕಟ್ಟಬೇಕು ತುಂಬಾ ಡಿಲೇ ಆದ್ರೆ ನಿಮ್ಮ ರಿನ್ಯೂವಲ್ ರಿಕ್ವೆಸ್ಟ್ ರಿಜೆಕ್ಟ್ ಆಗಿ ಪಾಲಿಸಿನೇ ಲ್ಯಾಪ್ಸ್ ಆಗೋ ಚಾನ್ಸಸ್ ಇರುತ್ತೆ ಎಲ್ಲಕ್ಕಿಂತ ಮುಖ್ಯವಾಗಿ ನೀವು ದಂಡ ಕಟ್ಟೋ ಸಂದರ್ಭ ಬಂದ್ರು ಬರಬಹುದು ಪಾಲಿಸಿ ಅವಧಿ ಮುಗಿಯೋಕು ಮುಂಚೆ ರಿನ್ಯೂವಲ್ ಮಾಡಿಸೋದು ಉತ್ತಮ.


ಭಾರತೀಯ ವಿಮೆ ನಿಯಂತ್ರಣ ಪ್ರಾಧಿಕಾರದ ಮಾಹಿತಿಗಾಗಿ:

  • ಅಧಿಕೃತ ವೆಬ್‌ಸೈಟ್: Insurance Regulatory and Development Authority of India (IRDAI)
  • ಲಿಂಕ್: https://irdai.gov.in/](https://irdai.gov.in/
  • [ಭಾರತೀಯ ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ (IRDAI) ನಿಯಮಾವಳಿಗಳನ್ನು ತಿಳಿಯಿರಿ]

ಮುಕ್ತಾಯ (Conclusion):

ವಾಹನ ವಿಮೆ ಎಂಬುದು ಕೇವಲ ಪೊಲೀಸರ ದಂಡದಿಂದ ತಪ್ಪಿಸಿಕೊಳ್ಳಲು ಮಾಡುವ ದಾಖಲೆಯಲ್ಲ. ಅಪಘಾತ ಅಥವಾ ಕಳ್ಳತನದಂತಹ ಅನಿರೀಕ್ಷಿತ ಸಂದರ್ಭಗಳಲ್ಲಿ ನಿಮ್ಮ ಜೇಬಿಗೆ ಬೀಳುವ ದೊಡ್ಡ ಆರ್ಥಿಕ ಹೊಡೆತದಿಂದ ನಿಮ್ಮನ್ನು ರಕ್ಷಿಸುವ ಕವಚ. ನಿಮ್ಮ ವಾಹನದ ವಯಸ್ಸು ಮತ್ತು ಬಳಕೆಗೆ ತಕ್ಕಂತೆ IDV, Zero Dep ಮತ್ತು Engine Protection ನಂತಹ ಆಡ್-ಆನ್‌ಗಳನ್ನು ಸರಿಯಾಗಿ ಆಯ್ಕೆ ಮಾಡಿ. ಪಾಲಿಸಿ ಲ್ಯಾಪ್ಸ್ ಆಗುವ ಮುನ್ನವೇ ರಿನ್ಯೂವಲ್ ಮಾಡಿಸಿ ಸುರಕ್ಷಿತವಾಗಿ ಚಾಲನೆ ಮಾಡಿ!

ನಿಮ್ಮ ವಾಹನಕ್ಕೆ ನೀವು ಯಾವ ರೀತಿಯ ಇನ್ಶೂರೆನ್ಸ್ ಮಾಡಿಸಿದ್ದೀರಿ? ಇನ್ಶೂರೆನ್ಸ್ ಕ್ಲೈಮ್ ಬಗ್ಗೆ ಏನಾದರೂ ಗೊಂದಲವಿದ್ದರೆ ಕೆಳಗೆ ಕಮೆಂಟ್ ಮಾಡಿ ಕೇಳಿ!


ನನ್ನ ಹಳೆಯ ಪೋಸ್ಟ್ ಅನ್ನು ಇಲ್ಲಿ ನೋಡಿ: https://kannadacarguide.in/electric-car-buying-guide-2026/


Thank you for visiting KannadaCarGuide.in ❤️

Leave a Comment

Your email address will not be published. Required fields are marked *

Scroll to Top