Automatic vs Manual Cars: ಆಟೋಮ್ಯಾಟಿಕ್ ಅಥವಾ ಮ್ಯಾನುವಲ್ ಕಾರು? ನಿಮ್ಮ ಬಳಕೆಗೆ ಯಾವುದು ಬೆಸ್ಟ್? ಕಂಪ್ಲೀಟ್ ಗೈಡ್ | 2026

ನಮಸ್ಕಾರ ಕರ್ನಾಟಕ.

Automatic vs Manual

ನೀವು ಹೊಸ ಕಾರ್ ಪರ್ಚೇಸ್ ಮಾಡೋದಕ್ಕೆ ಒಂದು ಶೋರೂಮ್ ನಲ್ಲಿ ಇದ್ದೀರಿ ಅಂತ ಅಂದುಕೊಳ್ಳಿ.

ಅಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್

ನಿಮ್ಮ ಮುಂದೆ ಎರಡು ಆಪ್ಷನ್ ಗಳನ್ನು ಇಟ್ಟಿದ್ದಾರೆ.

ಒಂದು ಮ್ಯಾನುವಲ್ ಗೇರ್ ಇರುವಂತಹ ಕಾರು ಇನ್ನೊಂದು ಆಟೋಮ್ಯಾಟಿಕ್ ಕಾರು.

ನೀವು ಯಾವುದನ್ನು ಚೂಸ್ ಮಾಡ್ತೀರಿ?

ತುಂಬಾ ಜನರಿಗೆ ಕಾರ್ ಪರ್ಚೇಸ್ ಮಾಡಬೇಕು ಅನ್ನುವಾಗ ಈ ಗೊಂದಲ ಇದ್ದೇ ಇರುತ್ತೆ.

ದಶಕಗಳಿಂದ ಭಾರತದ ರಸ್ತೆಗಳನ್ನ ಮ್ಯಾನುವಲ್ ಕಾರುಗಳೇ ಆಳಿವೆ.

ಅವು ಬಜೆಟ್ ಮೇಂಟೆನಿನ್ಸ್ ಸುಲಭ ಮತ್ತು ಡ್ರೈವರ್ ಗೆ ಕಾರಿನ ಮೇಲೆ ಕಂಪ್ಲೀಟ್ ಕಂಟ್ರೋಲ್ ಇರುತ್ತೆ.

ಆದರೆ ಇತ್ತೀಚಿನ ವರ್ಷಗಳಲ್ಲಿ ಅದರಲ್ಲೂ ಕೂಡ ಸಿಟಿಗಳಲ್ಲಿ ಟ್ರಾಫಿಕ್ ಜಾಮ್ ಹೆಚ್ಚಾದಂತೆ ಪದೇ ಪದೇ ಗೇರ್ ಬದಲಿಸುವ ಕಿರಿಕಿರಿ ಇಲ್ಲದ ಆಟೋಮ್ಯಾಟಿಕ್ ಕಾರುಗಳತ್ತ ಜನ ವಾಲ್ತಾ ಇದ್ದಾರೆ.

ಅಂದ್ರೆ ಆಟೋಮ್ಯಾಟಿಕ್ ಕಾರುಗಳೇ ಹೆಚ್ಚು ಜನಪ್ರಿಯವಾಗ್ತಾ ಇದೆ.

ನೀವೇನಾದ್ರೂ ಕಾರ್ ಪರ್ಚೇಸ್ ಮಾಡಬೇಕು ಅಂತಿದ್ರೆ ನಿಮಗೆ ಇವೆರಡರಲ್ಲಿ ಯಾವುದು ಬೇಕು ಅಂತ ಗೊಂದಲವಿದ್ರೆ

ಈ ಲೇಖನ ನಿಮಗೋಸ್ಕರನೇ.

ಬೆಲೆ, ಫೆಸಿಲಿಟಿ, ಮೈಲೇಜ್ ಮತ್ತು ರೀಸೇಲ್ ವ್ಯಾಲ್ಯೂ ಹೀಗೆ ಪ್ರತಿಯೊಂದು ವಿಷಯವನ್ನು ಕೂಡ ಇನ್ ಡೀಟೇಲ್ ಆಗಿ ನೋಡೋಣ. ಈ ಲೇಖನ ನೀವು ಕಂಪ್ಲೀಟ್ ಆಗಿ ಓದಿ.

ಸೋ ಮೊದಲಿಗೆ ಈಗ ಮ್ಯಾನುವಲ್ ಟ್ರಾನ್ಸ್ಮಿಷನ್ ಅಂದ್ರೆ ಏನು ಅನ್ನೋದನ್ನ ನೋಡೋಣ.

ಮ್ಯಾನುವಲ್ ಟ್ರಾನ್ಸ್ಮಿಷನ್ ಅಂತ ಹೇಳಿದ್ರೆ ಇಲ್ಲಿ ಡ್ರೈವ್ ಮಾಡುವರ ಕೈಯಲ್ಲೇ ಎಲ್ಲಾ ಇರುತ್ತೆ. ಅಂದ್ರೆ ಕಾರ್ ಓಡಿಸಬೇಕು ಅಂತ ಹೇಳಿದ್ರೆ ಕ್ಲಚ್ ಒತ್ತಿ ಗೇರ್ ಲಿವರ್ ಅನ್ನ ಬಳಸಿ ಗೇರ್ ಅನ್ನ ಬದಲಿಸಬೇಕಾಗುತ್ತೆ.

ಕಾರು ವೇಗವಾಗಿ ಹೋಗಬೇಕು ಅಂತ ಹೇಳಿದಾಗ ವೇಗಕ್ಕೆ ಅನುಗುಣವಾಗಿ ಡ್ರೈವರ್ ಗೇರ್ ಚೇಂಜ್ ಮಾಡ್ತಾ ಇರಬೇಕು. ವೇಗ ಜಾಸ್ತಿ ಮಾಡೋದು ಅಂತ ಹೇಳಿದ್ರೆ ಮೂರರಿಂದ ನಾಲ್ಕನೇ ಗೇರ್ ಹಾಕೋದು, ನಾಲ್ಕರಿಂದ ಐದನೇ ಗೇರ್ ಹಾಕೋದು ಹೀಗೆ ಜಾಸ್ತಿ ಮಾಡ್ತಾ ಹೋಗಬೇಕಾಗುತ್ತೆ.

ಹಾಗೇನೇ ಕಾರಿನ ವೇಗ ಕಡಿಮೆ ಮಾಡಬೇಕು ಅಂತ ಹೇಳಿದಾಗ ಐದರಲ್ಲಿ ಇದ್ರೆ ನಾಲ್ಕಕ್ಕೆ ಗೇರ್ ಹಾಕಬೇಕು ಆಮೇಲೆ ಮೂರನೇ ಗೇರ್ ಹಾಕಬೇಕಾಗುತ್ತೆ.

ಸೋ ಉದಾಹರಣೆಗೆ ಹೇಳಬೇಕು ಅಂತ ಹೇಳಿದ್ರೆ ಮ್ಯಾನುವಲ್ ಟ್ರಾನ್ಸ್ಮಿಷನ್ ಅಲ್ಲಿ ಬಹಳಷ್ಟು ಕಾರುಗಳು ನಿಮಗೆ ಸಿಗುತ್ತೆ. ಮ್ಯಾನುವಲ್ ವೇರಿಯೆಂಟ್ಸ್ ಅಂತ ಹೇಳಿ ಇರುತ್ತೆ. ನೀವು ಕೂಡ ಇದನ್ನ ಗಮನಿಸಿರಬಹುದು.

ಹಾಗಿದ್ರೆ ಈ ಮ್ಯಾನುವಲ್ ಟ್ರಾನ್ಸ್ಮಿಷನ್ ನಿಂದ ಆಗುವಂತಹ ಲಾಭಗಳು ಏನು ಅಂತ ಹೇಳಿ. ನೋಡಿ ಬೆಲೆ ಸ್ವಲ್ಪ ಕಡಿಮೆ ಇರುತ್ತೆ. ಹೈವೆ ಮತ್ತು ಗಾಡ್ ಸೆಕ್ಷನ್ ಗಳಲ್ಲಿ ಉತ್ತಮ ಕಂಟ್ರೋಲ್, ರಿಪೇರಿ ಖರ್ಚು ಕೂಡ ಸ್ವಲ್ಪ ಕಡಿಮೆ ಅಂತಾನೆ ಹೇಳಬಹುದು.

ಎಲ್ಲಕ್ಕಿಂತ ಹೆಚ್ಚಾಗಿ ಕಾರಿನ ಕಂಟ್ರೋಲ್ ಸಂಪೂರ್ಣವಾಗಿ ಕಾರು ಓಡಿಸುವವರ ಕೈಯಲ್ಲೇ ಇರುತ್ತೆ ಅಂತ ಹೇಳಬಹುದು.


ಇನ್ನು ನೆಕ್ಸ್ಟ್ ನಾವು ನೋಡಬೇಕಾಗಿರೋದು ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಬಗ್ಗೆ.

ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಏನು ಅಂತ ಹೇಳಿದ್ರೆ?

ನೋಡಿ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಅಂತ ಹೇಳಿದ್ರೆ ಇಲ್ಲಿ ಕಾರ್ ಸ್ಟಾರ್ಟ್ ಮಾಡಿ ನಂತರ ಒಂದು ಸಲ ಗೇರ್ ಹಾಕಿದ್ರೆ ಆಯ್ತು. ನಂತರ ತಾನಾಗಿಯೇ ಕಾರು ವೇಗಕ್ಕೆ ಅನುಗುಣವಾಗಿ ಗೇರ್ ಅನ್ನ ಬದಲಿಸುತ್ತೆ.

ಇದರಲ್ಲಿ ಎಎಂಟಿ, ಸಿವಿಟಿ, ಟಾರ್ಕ್ ಕನ್ವರ್ಟರ್ ಮತ್ತು ಡ್ಯುಯಲ್ ಕ್ಲಚ್ ಡಿಸಿಟಿ ಅಂತ ಹೇಳುವಂತಹ ವಿಧಗಳಿದ್ದಾವೆ.

ಉದಾಹರಣೆಗೆ ಹೇಳಬೇಕು ಅಂತ ಹೇಳಿದ್ರೆ ಮಾರುತಿ ಬಲೆನೋ ಸಿವಿಟಿ, ಹುಂಡೈ ಐ20 ಸಿವಿಟಿ, ಕಿಯಾ ಸೋನೆಟ್ ಡಿಸಿಟಿ ಈ ತರ.

ಈ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಇಂದ ಆಗುವಂತಹ ಲಾಭಗಳೇನು? ಮ್ಯಾನುವಲ್ ಟ್ರಾನ್ಸ್ಮಿಷನ್ ಗೆ ಕಂಪೇರ್ ಮಾಡಿದ್ರೆ ಇದರಲ್ಲಿ ಕಾರು ಓಡಿಸುವವರಿಗೆ ಒಂದು ಸ್ವಲ್ಪ ಜಾಸ್ತಿ ಲಾಭ ಅಂತಾನೆ ಹೇಳಬಹುದು.

ಹೌದು, ಟ್ರಾಫಿಕ್ ನಲ್ಲಿ ಸುಲಭವಾಗಿ ಓಡಿಸಬಹುದು. ಕ್ಲಚ್ ಕಿರಿಕಿರಿ ಇಲ್ಲ. ಪದೇ ಪದೇ ಗೇರ್ ಬದಲಿಸುವಂತಹ ಅವಶ್ಯಕತೆ ಇರುವುದಿಲ್ಲ.

ಹೈವೆಯಲ್ಲೂ ಕೂಡ ಆರಾಮವಾಗಿ ಸ್ಟೇರಿಂಗ್ ಹಿಡ್ಕೊಂಡು ಕೂತ್ಕೊಬಹುದು. ಎಕ್ಸಿಲರೇಟರ್ ಹಾಗೂ ಬ್ರೇಕ್ ಒತ್ತುವ ಕೆಲಸ ಮಾತ್ರ ಇರುತ್ತೆ.

ಹಾಗೇನೇ ಹೊಸದಾಗಿ ಕಾರು ಕಲಿಯುವಂತವರಿಗೆ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಬೆಸ್ಟ್ ಅಂತಾನೆ ಹೇಳಬಹುದು.

ಈಗ ಕ್ವಿಕ್ ಆಗಿ ಮ್ಯಾನುವಲ್ ಟ್ರಾನ್ಸ್ಮಿಷನ್ ಹಾಗೆ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಕಾರುಗಳ ವ್ಯತ್ಯಾಸವನ್ನ ನೋಡ್ತಾ ಹೋಗೋಣ.

ನೋಡಿ ಕಂಟ್ರೋಲ್. ಮ್ಯಾನುವಲ್ ಕಾರಲ್ಲಿ ಗೇರುಗಳ ಮೇಲೆ ಡ್ರೈವರ್ ಗೆ ಸಂಪೂರ್ಣ ನಿಯಂತ್ರಣ ಇರುತ್ತೆ. ಅದೇ ಆಟೋಮ್ಯಾಟಿಕ್ ಕಾರಾದ್ರೆ ಕಾರೇ ಗೇರ್ ಅನ್ನ ನಿರ್ವಹಣೆ ಮಾಡುತ್ತೆ.

ಇನ್ನು ಬೆಲೆ ಅಂತ ಬಂದ್ರೆ ಮ್ಯಾನುವಲ್ ಕಾರಿಗೆ ಕಡಿಮೆ ಬೆಲೆ ಅಂತಾನೆ ಹೇಳಬಹುದು. ಬಜೆಟ್ ಅಂತ ಕೂಡ ಹೇಳಬಹುದು. ಆಟೋಮ್ಯಾಟಿಕ್ ಕಾರು ಅಂತ ನೋಡಿದಾಗ ಒಂದರಿಂದ ಎರಡು ಲಕ್ಷ ರೂಪಾಯಿ ಜಾಸ್ತಿ ಇರುತ್ತೆ.

ಹಾಗೇನೇ ಮೈಲೇಜ್. ಮ್ಯಾನುವಲ್ ಕಾರು ಹೈವೆಗಳಲ್ಲಿ ಉತ್ತಮ ಮೈಲೇಜ್ ಅನ್ನ ಕೊಡುತ್ತೆ. ಆದರೆ ಆಟೋಮ್ಯಾಟಿಕ್ ಕಾರುಗಳು ಸಿಟಿ ಟ್ರಾಫಿಕ್ ನಲ್ಲಿ ಉತ್ತಮ ಮೈಲೇಜ್ ಅನ್ನ ಕೊಡುತ್ತೆ ಅಂತ ಹೇಳಬಹುದು.

ಇನ್ನು ಮೇಂಟೆನೆನ್ಸ್. ಮ್ಯಾನುವಲ್ ಕಾರು ಸರಳ ಮತ್ತು ಅಗ್ಗ ಅಂತ ಹೇಳಬಹುದು. ಬಟ್ ಆಟೋಮ್ಯಾಟಿಕ್ ಕಾರು ಮ್ಯಾನುವಲ್ ಕಾರಿಗೆ ಕಂಪೇರ್ ಮಾಡಿದಾಗ ಒಂದು ಸ್ವಲ್ಪ ದುಬಾರಿ ಅಂತ ಅನ್ಸುತ್ತೆ.

ಇನ್ನು ಬಳಕೆ. ಹಳ್ಳಿ ಅಥವಾ ಬೆಟ್ಟದ ಪ್ರದೇಶಗಳಿಗೆ, ಗಾಡ್ ಸೆಕ್ಷನ್ ಗಳಿಗೆ ಮ್ಯಾನುವಲ್ ಕಾರು ಉತ್ತಮ ಅಂತ ಹೇಳಬಹುದು. ಆಟೋಮ್ಯಾಟಿಕ್ ಕಾರು ಅಂತ ಬಂದಾಗ ಇದು ಸಿಟಿಯಲ್ಲಿ ಡ್ರೈವ್ ಮಾಡೋದಕ್ಕೆ ಉತ್ತಮ ಅಂತ ನಾವು ಹೇಳಬಹುದು.

ಹಾಗಿದ್ರೆ ಮ್ಯಾನುವಲ್ ಟ್ರಾನ್ಸ್ಮಿಷನ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಕಾರುಗಳಲ್ಲಿ ಪ್ಲಸ್ ಪಾಯಿಂಟ್ ಮೈನಸ್ ಪಾಯಿಂಟ್ ಏನು ಅಂತ ಬಂದಾಗ.


ಮೊದಲನೆಯದಾಗಿ ಮ್ಯಾನುವಲ್ ಕಾರ್. ಇದರ ಪ್ಲಸ್ ಪಾಯಿಂಟ್ ಅಂತ ಹೇಳಿದ್ರೆ

ಆರಂಭಿಕ ಬೆಲೆ ಕಡಿಮೆ, ಗಾಡ್ ಸೆಕ್ಷನ್ ಗಳಲ್ಲಿ ಉತ್ತಮ ಹಿಡಿತ ಸಿಗುತ್ತೆ. ಹೈವೇನಲ್ಲಿ ಒಳ್ಳೆಯ ಮೈಲೇಜ್ ಅನ್ನ ಈ ಕಾರುಗಳು ಕೊಡಬಹುದು.

ಇದರ ಮೈನಸ್ ಪಾಯಿಂಟ್ಸ್ ಅಂತ ಹೇಳಿದ್ರೆ ಸಿಟಿ ಟ್ರಾಫಿಕ್ ನಲ್ಲಿ ನಿಮಗೆ ಪದೇ ಪದೇ ಕ್ಲಚ್ ಒತ್ತಿ ಕಾಲು ನೋವು ಬರಬಹುದು. ಹೊಸಬರಿಗೆ ಇದನ್ನ ಕಲಿಯೋದು ಒಂದು ಸ್ವಲ್ಪ ಕಷ್ಟ ಅಂತ ಹೇಳಬಹುದು.


ಇದಕ್ಕೆ ಕಂಪೇರ್ ಮಾಡಿದ್ರೆ ಆಟೋಮ್ಯಾಟಿಕ್ ಕಾರುಗಳ ಪ್ಲಸ್ ಏನು ಮೈನಸ್ ಏನು?

ಇದರ ಪ್ಲಸ್ ಪಾಯಿಂಟ್ ಟ್ರಾಫಿಕ್ ನಲ್ಲಿ ಆರಾಮದಾಯಕ ಚಾಲನೆ, ಮರು ಮಾರಾಟ ಮಾಡುವಾಗ ಒಂದು ಸ್ವಲ್ಪ ಡಿಮ್ಯಾಂಡ್ ಕೂಡ ಹೆಚ್ಚು ಸಿಗಬಹುದು.

ಮೈನಸ್ ಪಾಯಿಂಟ್ಸ್ ಏನು ಅಂತ ಹೇಳಿದ್ರೆ ಮ್ಯಾನುವಲ್ ಕಾರಿಗಿಂತ ಒಂದೆರಡು ಲಕ್ಷ ರೂಪಾಯಿ ದುಬಾರಿ. ಹಾಗೇನೇ ರಿಪೇರಿ ಖರ್ಚು ಒಂದು ಸ್ವಲ್ಪ ಜಾಸ್ತಿ ಬರಬಹುದು ಅಂತ ನಾವು ಇಲ್ಲಿ ಗಮನಿಸಬೇಕಾಗುತ್ತೆ.

ಇನ್ನು ಕಾಸ್ಟ್ ಅಂಡ್ ಮೇಂಟೆನೆನ್ಸ್ ಅಂತ ನೋಡಿದ್ರೆ ನೋಡಿ ಖರೀದಿ ಬೆಲೆ. ಭಾರತದಲ್ಲಿ ಒಂದೇ ಮಾಡೆಲ್ ನ ಮ್ಯಾನುವಲ್ ಕಾರಿಗಿಂತ ಆಟೋಮ್ಯಾಟಿಕ್ ಕಾರಿನ ಬೆಲೆ ಸುಮಾರು ಒಂದರಿಂದ ಎರಡು ಲಕ್ಷ ರೂಪಾಯಿ ಹೆಚ್ಚಿರುತ್ತೆ ಅಂತಾನೆ ಹೇಳಬಹುದು.

ಇನ್ನು ಎರಡನೆಯದು ಮೇಂಟೆನೆನ್ಸ್. ಮ್ಯಾನುವಲ್ ಕಾರಿನಲ್ಲಿ ಬಿಡಿ ಭಾಗಗಳು ಅಂದ್ರೆ ಪಾರ್ಟ್ಸ್, ಸ್ಪೇರ್ ಪಾರ್ಟ್ಸ್ ಕಡಿಮೆ ಇರೋದ್ರಿಂದ ಸರ್ವಿಸ್ ಅಗ್ಗ. ಆಟೋಮ್ಯಾಟಿಕ್ ಗೇರ್ ಬಾಕ್ಸ್ ವಿನ್ಯಾಸ ಒಂದು ಸ್ವಲ್ಪ ಜಟಿಲವಾಗಿರೋದ್ರಿಂದ ಸರ್ವಿಸ್ ಬಿಲ್ ಒಂದು ಸ್ವಲ್ಪ ಜಾಸ್ತಿ ಬರಬಹುದು ಅಂತ ನಾವು ಹೇಳಬಹುದು.

ಇನ್ನು ಮೂರನೆಯದು ಇನ್ಶೂರೆನ್ಸ್. ಆಟೋಮ್ಯಾಟಿಕ್ ಕಾರಿನ ಬೆಲೆ ಮತ್ತು ರಿಪೇರಿ ಖರ್ಚು ಹೆಚ್ಚಿರೋದ್ರಿಂದ ಇನ್ಶೂರೆನ್ಸ್ ಪ್ರೀಮಿಯಂ ಕೂಡ ನೀವು ಮ್ಯಾನುವಲ್ ಟ್ರಾನ್ಸ್ಮಿಷನ್ ಗೆ ಕಂಪೇರ್ ಮಾಡಿದಾಗ ಜಾಸ್ತಿ ಇರುತ್ತೆ.


ಆಟೋಮ್ಯಾಟಿಕ್ ಗೇರ್‌ಬಾಕ್ಸ್ ತಂತ್ರಜ್ಞಾನದ ಕುರಿತು:

  • ಅಧಿಕೃತ ವೆಬ್‌ಸೈಟ್: ವಿಕಿಪೀಡಿಯಾ – Automatic Transmission
  • ಲಿಂಕ್: https://en.wikipedia.org/wiki/Automatic_transmission
  • [ಆಟೋಮ್ಯಾಟಿಕ್ ಗೇರ್‌ಬಾಕ್ಸ್ ತಂತ್ರಜ್ಞಾನದ ಕುರಿತು ಇನ್ನಷ್ಟು ತಿಳಿಯಿರಿ]

Manual vs Automatic car comparison chart Kannada.Automatic vs Manual

ಇನ್ನು ನೆಕ್ಸ್ಟ್ ತುಂಬಾ ಇಂಪಾರ್ಟೆಂಟ್ ಮೈಲೇಜ್.

ಮೈಲೇಜ್ ವಿಷಯ ಫ್ಯೂಯಲ್ ಎಫಿಷಿಯೆನ್ಸಿ ನೋಡೋದಿದ್ರೆ ಸಿಟಿ ಟ್ರಾಫಿಕ್. ಸಿವಿಟಿ ಮಾದರಿ ಆಟೋಮ್ಯಾಟಿಕ್ ಕಾರುಗಳು ನಗರ ಪ್ರದೇಶಗಳಲ್ಲಿ ಅಂದ್ರೆ ಸಿಟಿಯಲ್ಲಿ ಮ್ಯಾನುವಲ್ ಕಾರಿಗಿಂತ ಉತ್ತಮ ಅಥವಾ ಸಮನಾದ ಮೈಲೇಜ್ ಅನ್ನ ಕೊಡಬಹುದು.

ಅದೇ ನಾವು ಹೈವೇಗೆ ಬಂದ್ರೆ ಕಾರ್ ತಗೊಂಡು ಲಾಂಗ್ ಡ್ರೈವ್ ಹೋದಾಗ ಮ್ಯಾನುವಲ್ ಕಾರುಗಳು ಅತಿ ಹೆಚ್ಚು ಮೈಲೇಜ್ ನೀಡುವಂತಹ ಸಾಧ್ಯತೆ ಇದೆ.

ಹಾಗೇನೇ ನೆಕ್ಸ್ಟ್ ನಾವು ನೋಡಬೇಕಾಗಿರೋದು ಗಾಡ್ ಸೆಕ್ಷನ್. ಇಂಜಿನ್ ಕಂಟ್ರೋಲ್ ಮ್ಯಾನುವಲ್ ಕಾರಿನಲ್ಲಿ ಚೆನ್ನಾಗಿ ಇರೋದ್ರಿಂದ ಅಲ್ಲಿ ಮ್ಯಾನುವಲ್ ಕಾರಿನದ್ದೇ ಮೇಲುಗೈ ಅಂತ ನಾವು ಹೇಳಬಹುದು.

ಇನ್ನು ಸಿಟಿ ವರ್ಸಸ್ ಗಾಡ್ ಸೆಕ್ಷನ್ ಗೆ ಯಾವುದು ಸೂಕ್ತ ಅಂತ ನೋಡೋದಿದ್ರೆ ನೀವು ಬೆಂಗಳೂರು, ಮುಂಬೈ ಅಥವಾ ದೆಹಲಿ ಅಂತ ವಿಪರೀತ ಟ್ರಾಫಿಕ್ ಇರುವಂತಹ ಸಿಟಿಗಳಲ್ಲಿ ವಾಸಿಸ್ತಾ ಇದ್ರೆ ಕಣ್ಣು ಮುಚ್ಚಿ ಆಟೋಮ್ಯಾಟಿಕ್ ಕಾರನ್ನ ಆರಿಸಿಕೊಳ್ಳಬಹುದು.

ಯಾಕಂದ್ರೆ ಪದೇ ಪದೇ ಕ್ಲಚ್ ಒತ್ತಿರುವಂತಹ ಕಿರಿಕಿರಿ ಇರೋದಿಲ್ಲ.

ಒಂದು ವೇಳೆ ನೀವು ಕೊಡಗು, ಚಿಕ್ಕಮಗಳೂರು ಅಥವಾ ಮಲೆನಾಡಿನಂತಹ ಬೆಟ್ಟ ಗುಡ್ಡಗಳ ಪ್ರದೇಶದಲ್ಲಿ ವಾಸಿಸ್ತಾ ಇದ್ರೆ ಅಥವಾ ಹೆಚ್ಚಾಗಿ ಆ ರಸ್ತೆಗಳ ಹಳ್ಳಿ ರಸ್ತೆಗಳಲ್ಲಿ ಓಡಾಡುವಂತದ್ದಾದರೆ ಮ್ಯಾನುವಲ್ ಕಾರು ಬೆಸ್ಟ್. ಯಾಕಂದ್ರೆ ಕಡಿದಾದ ರಸ್ತೆಗಳಲ್ಲಿ ಗೇರ್ ಕಂಟ್ರೋಲ್ ಮತ್ತು ಇಂಜಿನ್ ಬ್ರೇಕಿಂಗ್ ಮ್ಯಾನುವಲ್ ಕಾರಿನಲ್ಲಿ ಚೆನ್ನಾಗಿ ಕೆಲಸ ಮಾಡುತ್ತೆ. ಸೋ ನೀವು ಮ್ಯಾನುವಲ್ ಕಾರನ್ನ ಪರಿಗಣಿಸಬಹುದು.

ಸೋ ಟೋಟಲ್ ಆಗಿ ನಾವು ಕಂಪೇರ್ ಮಾಡಿ ನೋಡಿದಾಗ ಯಾವುದು ಬೆಸ್ಟ್ ಅನ್ನೋದು ನಿಮ್ಮ ಅವಶ್ಯಕತೆ ಮತ್ತು ಬಜೆಟ್ ಮೇಲೆ ನಿರ್ಧಾರವಾಗುತ್ತೆ.

ಮ್ಯಾನುವಲ್ ಕಾರನ್ನ ನೀವು ಆರಿಸ್ತೀರಿ ಅಂತ ಹೇಳಿದ್ರೆ ಒಂದು ವೇಳೆ ನಿಮಗೆ ಬಜೆಟ್ ಮುಖ್ಯವಾಗಿದ್ರೆ ಮತ್ತು ಕಾರಿನ ಮೇಲೆ ಸಂಪೂರ್ಣ ಕಂಟ್ರೋಲ್ ನಿಮಗೆ ಇರಬೇಕು ಅಂತ ಅನ್ಕೊಂಡ್ರೆ ನೀವು ಮ್ಯಾನುವಲ್ ಕಾರನ್ನ ಆರಿಸಿಕೊಳ್ಳಬಹುದು.

ಅದೇ ಆಟೋಮ್ಯಾಟಿಕ್ ಕಾರನ್ನ ಆರಿಸ್ತೀರಿ ಅಂತ ಹೇಳಿದ್ರೆ ಒಂದು ವೇಳೆ ನಿಮಗೆ ಆರಾಮದಾಯಕ ಪ್ರಯಾಣ ಬೇಕು ಮತ್ತು ಸಿಟಿ ಟ್ರಾಫಿಕ್ ನಲ್ಲಿ ಸುಲಭವಾಗಿ ಓಡಾಡಬೇಕು ಅಂತ ಹೇಳಿ ಅನ್ಕೊಳ್ಳುವವರಾದ್ರೆ ನೀವು ಆಟೋಮ್ಯಾಟಿಕ್ ಕಾರನ್ನ ಪರಿಗಣಿಸಬಹುದು.


ವಿಷಯManual CarAutomatic Car
ಬೆಲೆಕಡಿಮೆಹೆಚ್ಚು
ಟ್ರಾಫಿಕ್ಕಷ್ಟಸುಲಭ
ಮೈಲೇಜ್ಉತ್ತಮ (ಅನೇಕ ಮಾದರಿಗಳಲ್ಲಿ)ಮಾದರಿಯನ್ನು ಅವಲಂಬಿಸಿದೆ
Maintenanceಕಡಿಮೆಹೆಚ್ಚು
Highwayಉತ್ತಮ ನಿಯಂತ್ರಣಆರಾಮದಾಯಕ

ಕೇಂದ್ರ ಸರ್ಕಾರದ ವಾಹನ ನಿಯಮಗಳು ಮತ್ತು ಸಾರಿಗೆ ಸೇವೆಗಳಿಗೆ:


ಮುಕ್ತಾಯ (Conclusion):

ಒಟ್ಟಾರೆಯಾಗಿ ಹೇಳುವುದಾದರೆ, ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಕಾರುಗಳೆರಡಕ್ಕೂ ತಮ್ಮದೇ ಆದ ಪ್ಲಸ್ ಮತ್ತು ಮೈನಸ್ ಪಾಯಿಂಟ್‌ಗಳಿವೆ. ನಿಮ್ಮ ಆದ್ಯತೆ ಕಡಿಮೆ ಬಜೆಟ್, ಉತ್ತಮ ಮೈಲೇಜ್ ಮತ್ತು ಬೆಟ್ಟ-ಗುಡ್ಡ ಪ್ರದೇಶಗಳ ಡ್ರೈವಿಂಗ್ ಆಗಿದ್ದರೆ ಮ್ಯಾನುವಲ್ ಕಾರು ಅತ್ಯುತ್ತಮ ಆಯ್ಕೆ. ಆದರೆ, ನಿತ್ಯ ನಗರ ಪ್ರದೇಶದ ಟ್ರಾಫಿಕ್ ಕಿರಿಕಿರಿಯಿಲ್ಲದೆ ಆರಾಮದಾಯಕ ಪ್ರಯಾಣ ನಿಮ್ಮ ಗುರಿಯಾಗಿದ್ದರೆ ಆಟೋಮ್ಯಾಟಿಕ್ ಕಾರು ಸೂಕ್ತ. ನಿಮ್ಮ ಕುಟುಂಬದ ಅಗತ್ಯತೆ ಮತ್ತು ಬಜೆಟ್ ಅನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ಕಾರನ್ನು ಆಯ್ಕೆ ಮಾಡಿ.

ನೀವು ಯಾವ ಕಾರನ್ನು ಇಷ್ಟಪಡುತ್ತೀರಿ? ಮ್ಯಾನುವಲ್ ಅಥವಾ ಆಟೋಮ್ಯಾಟಿಕ್? ನಿಮ್ಮ ಅಭಿಪ್ರಾಯವನ್ನು ಕೆಳಗೆ ಕಮೆಂಟ್ ಮಾಡಿ ಮತ್ತು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ!

ನನ್ನ ಅಭಿಪ್ರಾಯ: ನೀವು ಬೆಂಗಳೂರಿನಂತಹ ನಗರದಲ್ಲಿ ಪ್ರತಿದಿನ ಟ್ರಾಫಿಕ್‌ನಲ್ಲಿ ಓಡಿಸುತ್ತಿದ್ದರೆ ಆಟೋಮ್ಯಾಟಿಕ್ ಕಾರು ಹೆಚ್ಚು ಆರಾಮದಾಯಕ. ಆದರೆ ಕಡಿಮೆ ಬಜೆಟ್ ಮತ್ತು ಹೈವೇ ಪ್ರಯಾಣ ಹೆಚ್ಚು ಇದ್ದರೆ ಮ್ಯಾನುವಲ್ ಕಾರು ಇನ್ನೂ ಉತ್ತಮ ಆಯ್ಕೆಯಾಗಬಹುದು.


ನನ್ನ ಹಳೆಯ ಪೋಸ್ಟ್ ಅನ್ನು ಇಲ್ಲಿ ನೋಡಿ :https://kannadacarguide.in/second-hand-car-buying-guide/


Thank you for visiting KannadaCarGuide.in ❤️

Leave a Comment

Your email address will not be published. Required fields are marked *

Scroll to Top