Second Hand Car
ನಮಸ್ಕಾರ ಕರ್ನಾಟಕ.
ನಮಸ್ಕಾರ ಕರ್ನಾಟಕ! ಹೊಸ ಕಾರು ಖರೀದಿಸುವುದು ಪ್ರತಿಯೊಬ್ಬರ ಕನಸು. ಆದರೆ ಬಜೆಟ್ ಕಡಿಮೆ ಇದ್ದಾಗ ಅನೇಕರು ಸೆಕೆಂಡ್ ಹ್ಯಾಂಡ್ ಕಾರನ್ನು ಆಯ್ಕೆ ಮಾಡುತ್ತಾರೆ. ಸರಿಯಾದ ಪರಿಶೀಲನೆ ಮಾಡದೇ ಕಾರು ಖರೀದಿಸಿದರೆ ಮುಂದೆ ಸಾವಿರಾರು ರೂಪಾಯಿ ರಿಪೇರಿ ವೆಚ್ಚ ಎದುರಾಗಬಹುದು. ಆದ್ದರಿಂದ ಈ ಲೇಖನದಲ್ಲಿ ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುವ ಮೊದಲು ತಪ್ಪದೇ ಪರಿಶೀಲಿಸಬೇಕಾದ 3 ಪ್ರಮುಖ ವಿಷಯಗಳನ್ನು ತಿಳಿದುಕೊಳ್ಳೋಣ.
ಆದರೆ ನೆನಪಿಟ್ಟುಕೊಳ್ಳಿ, ಈ ಒಂದು ತಪ್ಪು ನಿರ್ಧಾರ ನಿಮ್ಮ ಕಷ್ಟದ ಹಣವನ್ನು ನೀರಲ್ಲಿ ಹೋಮ ಮಾಡಿದಂತೆ ಆಗಿಬಿಡುತ್ತೆ.
ಇವತ್ತಿನ ಲೇಖನ ಸೆಕೆಂಡ್ ಹ್ಯಾಂಡ್ ಕಾರ್ ತಗೊಳ್ಳೋಕು ಮುನ್ನ ಏನೇನು ಚೆಕ್ ಮಾಡ್ಕೋಬೇಕು, ದ ಟಾಪ್ ಫೈವ್ ವಿಷಯವನ್ನ ಈಗ ಕಂಪ್ಲೀಟ್ ಆಗಿ ಈ ಲೇಖನದಲ್ಲಿ ತಿಳಿಸಿಕೊಡ್ತೀನಿ.
ಅಷ್ಟೇ ಅಲ್ಲ ನೀವು ಕಾರ್ ನ ಯಾವ ರೀತಿಯಾಗಿ ಚೆಕ್ ಮಾಡ್ಕೋಬೇಕು ಮತ್ತು ಎರಡನೆಯದು ಫೈನ್ ಗಳನ್ನ ಎಲ್ಲಿ ಚೆಕ್ ಮಾಡ್ಕೋಬೇಕು, ಆಮೇಲೆ ಎಷ್ಟನೇ ಓನರ್ ಇದ್ರೆ ನಾವು ಕಾರ್ ನ ತಗೋಬಹುದು.
ಫೈನ್ ಇದೆಯಾ ಇಲ್ವಾ ಅನ್ನೋದು ಗೊತ್ತಾಗಲ್ಲ ಅಥವಾ ಫೈನಾನ್ಸ್ ಇದೆಯಾ ಇಲ್ವಾ ಅನ್ನೋದು ಗೊತ್ತಾಗಲ್ಲ, ಈ ಎಲ್ಲವನ್ನು ಚೆಕ್ ಮಾಡ್ಕೋಬೇಕು ಅಂದ್ರೆ ಈ ಲೇಖನದಲ್ಲಿ ಎಲ್ಲೂ ಸ್ಕಿಪ್ ಮಾಡದೆ ಈ ಲೇಖನ ಕಂಪ್ಲೀಟ್ ಆಗಿ ಓದಿ.
1.ಕಾರಿನ ಪೇಪರ್ಸ್ ಮತ್ತು ಇನ್ಶೂರೆನ್ಸ್ ಪರಿಶೀಲನೆ
ಮೊದಲನೆಯದಾಗಿ ಕಾರ್ ನೋಡೋಕೆ ಚೆನ್ನಾಗಿದೆ ಅಂತ ಹಣವನ್ನು ಕೊಡೋಕೆ ಹೋಗ್ಬೇಡಿ. ಪೇಪರ್ಸ್ ಪಕ್ಕ ಇರಬೇಕು ಮತ್ತು ಫಸ್ಟ್ ಓನರ್, ಸೆಕೆಂಡ್ ಓನರ್, ಥರ್ಡ್ ಓನರ್ ಅನ್ನೋದನ್ನ ಚೆಕ್ ಮಾಡ್ಕೊಳ್ಳಿ, ಆದಷ್ಟು ಫಸ್ಟ್ ಓನರ್ ಆಗಿದ್ರೆ ತುಂಬಾನೇ ಉತ್ತಮ.
ಇನ್ನು ಇನ್ಶೂರೆನ್ಸ್ ವಿಷಯಕ್ಕೆ ಬರೋದಾದರೆ ಇನ್ಶೂರೆನ್ಸ್ ಪಾಲಿಸಿಯಲ್ಲಿ ಎನ್ ಸಿ ಬಿ (ನೋ ಕ್ಲೈಮ್ ಬೋನಸ್) ಎಷ್ಟಿದೆ ಅನ್ನೋದನ್ನ ಗಮನಿಸಿ. ಒಂದು ವೇಳೆ ಎನ್ ಸಿ ಬಿ ಜೀರೋ ಆಗಿದ್ರೆ ಅದರ ಅರ್ಥ ಕಳೆದ ವರ್ಷ ಈ ಕಾರ್ ನ ಮೇಲೆ ಆಕ್ಸಿಡೆಂಟ್ ಕ್ಲೈಮ್ ಆಗಿದೆ ಅಂತ ಅರ್ಥ ಮಾಡ್ಕೋಬೇಕು.
ಕಾರ್ ಮೇಲೆ ಲೋನ್ ಇದೆಯಾ? ಇದ್ರೆ ಬ್ಯಾಂಕ್ ನಿಂದ ಎನ್ ಓ ಸಿ (ನೋ ಆಬ್ಜೆಕ್ಷನ್ ಸರ್ಟಿಫಿಕೇಟ್) ಅನ್ನ ತಗೊಳ್ಳಬೇಕಾಗುತ್ತೆ, ಫಾರ್ ಎಕ್ಸಾಂಪಲ್ ನೋ ಆಬ್ಜೆಕ್ಷನ್ ಸರ್ಟಿಫಿಕೇಟ್ ಅನ್ನೋದು ತುಂಬಾನೇ ಮುಖ್ಯ ಆಗಿದೆ, ಅದು ಸಿಕ್ಕಿದೆ ಅಂತ ಖಚಿತಪಡಿಸಿಕೊಳ್ಳಿ ಅಂದ್ರೆ ಅವರಿಗೆ ಸರ್ ಸಿಕ್ಕಿದೆಯಾ ಇಲ್ವಾ ಅಂತ ನಮಗೆ ಕೊಡಿ ಸರ್ ಅಂತ ಕೇಳಬೇಕು.
ಇನ್ನು ಎಂ ಪರಿವಾಹನ್ ಆಪ್ ನ ಬಳಸಿ ಗಾಡಿಯ ಮೇಲೆ ಏನಾದರೂ ಹಳೆಯ ಟ್ರಾಫಿಕ್ ಫೈನ್ ಗಳು ಇದೆಯಾ, ಬಾಕಿ ಇದೆಯಾ ಅಂತ ತಿಳ್ಕೊಳ್ಳಿ, ಹಾಗೇನಾದರೂ ಇತ್ತು ಅಂದ್ರೆ ನೀವು ಬೈಯರ್ ಹತ್ತಿರ ಅಂದ್ರೆ ನೀವು ಪರ್ಚೇಸ್ ಮಾಡ್ತೀರಾ ಆಲ್ವಾ ಅವರಿಗೆ ಲೋನ್ ಅನ್ನ ಕ್ಲಿಯರ್ ಮಾಡ್ಕೊಟ್ಟು ಎಚ್ ಪಿ ಕ್ಯಾನ್ಸಲೇಷನ್ ತಗೊಳ್ಳಿ ಅಥವಾ ಫೈನ್ ಏನಾದ್ರೂ ಇದ್ರೆ ಸರ್ ಅದನ್ನ ಕ್ಲಿಯರ್ ಮಾಡ್ಕೊಡಿ ಅಂತ ಕೇಳಿ.
ಅಧಿಕೃತ ವೆಬ್‌ಸೈಟ್: ಪರಿವಾಹನ್ ಸೇವಾ (mParivahan)
ಲಿಂಕ್:https://parivahan.gov.in/
[ಕಾರಿನ ಆರ್‌ಸಿ ಮತ್ತು ಮಾಲೀಕರ ವಿವರಗಳನ್ನು ಪರಿವಾಹನ್ ಅಧಿಕೃತ ವೆಬ್‌ಸೈಟ್‌ನಲ್ಲಿ ಪರಿಶೀಲಿಸಿ]
ಇ-ಚಲನ್ ಮತ್ತು ಫೈನ್ ಪರಿಶೀಲಿಸಲು (For Traffic Fine Check):
- ಅಧಿಕೃತ ವೆಬ್‌ಸೈಟ್: ಪರಿವಾಹನ್ ಇ-ಚಲನ್ ಪೋರ್ಟಲ್ (Parivahan E-Challan)
- ಲಿಂಕ್: https://echallan.parivahan.gov.in/
- [ನಿಮ್ಮ ವಾಹನದ ಮೇಲಿರುವ ಬಾಕಿ ದಂಡವನ್ನು ಚೆಕ್ ಮಾಡಲು ಪರಿವಾಹನ್ ಇ-ಚಲನ್ ಪೋರ್ಟಲ್‌ಗೆ ಭೇಟಿ ನೀಡಿ]
2.ಆಕ್ಸಿಡೆಂಟ್ ಆಗಿದೆ ಎಂದು ಪತ್ತೆ ಹಚ್ಚುವುದು ಹೇಗೆ?
ಸರ್ ಹಾಗಿದ್ರೆ ಗಾಡಿ ಆಕ್ಸಿಡೆಂಟ್ ಆಗಿದೆಯಾ ಅಂತ ಹೇಗೆ ತಿಳ್ಕೊಳ್ಳೋದು?
ಎಷ್ಟೋ ಜನಕ್ಕೆ ಈ ವಿಷಯ ಗೊತ್ತೇ ಇಲ್ಲ, ಹೇಗೆ ಚೆಕ್ ಮಾಡ್ಕೋಬೇಕು ಅನ್ನೋದನ್ನ ನಾನು ಸಿಂಪಲ್ ಆಗಿ ಹೇಳ್ತೀನಿ ನೋಡಿ.
ಬಹಳಷ್ಟು ಜನ ಗಾಡಿಯನ್ನು ಪೇಂಟ್ ಮಾಡಿಸಿ ಹೊಸದಂತೆ ತೋರಿಸ್ತಾರೆ ಏಕೆಂದರೆ ಸೇಲ್ ಮಾಡಬೇಕು ಅನ್ನೋ ಕಾನ್ಸೆಪ್ಟ್ ಅಲ್ಲಿ.
ಆದರೆ ಇದನ್ನ ಪತ್ತೆ ಹಚ್ಚೋದು ಹೇಗೆ ಅಂತ ಅಂದ್ರೆ ಪ್ಯಾನೆಲ್ ಗ್ಯಾಪ್ ಅಂತ ಒಂದು ಕರೀತೀವಿ ನಾವು, ಅಂದ್ರೆ ಬಾನೆಟ್ ಡೋರ್ ಗಳಾಗಿರಬಹುದು, ಬಾನೆಟ್ ಗಳಾಗಿರಬಹುದು, ಡಿಕ್ಕಿ ನಡುವಿನ ಗ್ಯಾಪ್ಸ್ ಏನಾದರೂ ಒಂದೇ ಸಮ ಇದೆಯಾ ಅಥವಾ ಸ್ವಲ್ಪ ಹಿಂದೆ ಮುಂದೆ ಇದೆಯಾ ಅಥವಾ ಜಾಸ್ತಿ ಗ್ಯಾಪ್ ಕಾಣ್ತಿದೆಯಾ ಅಂತ ಚೆಕ್ ಮಾಡ್ಕೊಳ್ಳಿ.
ಒಂದು ಕಡೆ ಹೆಚ್ಚು ಒಂದು ಕಡೆ ಕಡಿಮೆ ಇದ್ರೆ ಅದು ರೀ ಪೇಂಟ್ ಆಗಿದೆ ಅಥವಾ ಆಕ್ಸಿಡೆಂಟ್ ಆಗಿದೆ ಅಂತ ಅರ್ಥ ಅಂತ ನೀವೇ ಡಿಸೈಡ್ ಮಾಡ್ಕೋಬಿಡಿ.
ಇನ್ನು ಮುಖ್ಯವಾಗಿರುವಂತದ್ದೆ ಏಪ್ರಾನ್.
ಏನಿದು ಸರ್ ಏಪ್ರಾನ್ ಪರೀಕ್ಷೆ ಅಂತ ಅಂದ್ರೆ?
ಬಾನೆಟ್ ತರದು ಇಂಜಿನ್ ಪಕ್ಕದಲ್ಲಿ ಇರುವಂತಹ ಒಂದು ಒಂದು ಡಾಟ್ ಗಳಿರ್ತಾವೆ, ಆ ಡಾಟ್ ಪಂಚ್ ಡಾಟ್ ಏನಾದ್ರೂ ಮಿಸ್ ಆಗಿದೆಯಾ ಅಂತ ಚೆಕ್ ಮಾಡ್ಕೊಳ್ಳಿ.
ಅಲ್ಲಿ ಏನಾದ್ರೂ ವೆಲ್ಡಿಂಗ್ ಮಾರ್ಕ್ಸ್ ಇದ್ರೆ ಅಥವಾ ಅಸಹಜವಾದಂತಹ ಏನಾದ್ರೂ ಕಟ್ ಗಳಾಗಿದ್ರೆ ಅದು ದೊಡ್ಡ ಆಕ್ಸಿಡೆಂಟ್ ಆಗಿದೆ ಅಂತ ಗ್ಯಾರಂಟಿ ನೀವೇ ತಿಳ್ಕೊಂಡುಬಿಡಿ.
ಇನ್ನು ಬಿಡ್ಡಿಂಗ್ ಅನ್ನ ಚೆಕ್ ಮಾಡ್ಕೊಳ್ಳಿ ಏಕೆಂದರೆ ಡೋರ್ ಬಿಡ್ಡಿಂಗ್ ಅತ್ಯಂತ ಮಹತ್ವ
ಬಾಗಿಲಿನ ರಬ್ಬರ್ ಬಿಡ್ಡಿಂಗ್ ಗಳು ತೆಗೆದು ನೋಡಿ ಒಂದು ಸಲ, ಕಂಪನಿಯ ಒರಿಜಿನಲ್ ಸ್ಪಾಟ್ ವೆಲ್ಡಿಂಗ್ ಇರಬೇಕು ದಟ್ ಇಸ್ ಮೋಸ್ಟ್ ಇಂಪಾರ್ಟೆಂಟ್, ನಾನು ಹೇಳಿದ್ನಲ್ಲ ಪಂಚಿಂಗ್ ಇರಬೇಕು, ಆ ಪಂಚಿಂಗ್ ಇದ್ರೆ ನಿಮಗೆ ಗಾಡಿ ಎಲ್ಲೂ ಕೂಡ ಆಕ್ಸಿಡೆಂಟ್ ಆಗಿಲ್ಲ ಅಂತ.

3.ಇಂಜಿನ್ ಮತ್ತು ಟೆಸ್ಟ್ ಡ್ರೈವ್
ಇನ್ನು ಇಂಜಿನ್ ಮತ್ತು ಮೆಕ್ಯಾನಿಕಲ್ ಕಂಡೀಷನ್ ಹೇಗೆ ಚೆಕ್ ಮಾಡ್ಕೊಳ್ಳೋದು ಸರ್ ಅಂದ್ರೆ. ಕಾರ್ ನ ಒಂದು ಹೃದಯ ಅಂತಾನೆ ಕರಿಬಹುದು ಇಂಜಿನ್ ವೈಸ್ ಅಲ್ಲಿ.
ಇದನ್ನ ಪರೀಕ್ಷಿಸಿಕೊಳ್ಳಬೇಕು ಅಂದ್ರೆ ಈ ಟ್ರಿಕ್ ಅನ್ನ ಬಳಸಿಕೊಳ್ಳಿ, ಇದನ್ನ ನಾವು ಕೋಲ್ಡ್ ಸ್ಟಾರ್ಟ್ ಅಂತ ಕರೀತೀವಿ.
ಅಂದ್ರೆ ಗಾಡಿಯನ್ನು ಸ್ಟಾರ್ಟ್ ಮಾಡಿದಾಗ ಸೈಲೆನ್ಸರ್ ನಿಂದ ಏನಾದ್ರೂ ಬಿಳಿ ಅಥವಾ ತುಂಬಾ ಕಪ್ಪು ಹೊಗೆ ಏನಾದ್ರೂ ಬರ್ತಾ ಇದೆಯಾ? ಬರ್ತಿದ್ರೆ ದಯವಿಟ್ಟು ಆ ಗಾಡಿಯನ್ನು ತಗೊಳ್ಳಲೇಬೇಡಿ.
ನೆಕ್ಸ್ಟ್ ಮೇಜರ್ ಪಾಯಿಂಟ್ ಆಯಿಲ್ ಲೀಕೇಜ್ ಏನಾದ್ರೂ ಇದೆಯಾ?
ಫಾರ್ ಎಕ್ಸಾಂಪಲ್ ಇಂಜಿನ್ ಕೆಳಭಾಗದಲ್ಲಿ ಆಯಿಲ್ ಏನಾದ್ರೂ ಲೀಕೇಜ್ ಇದೆಯಾ, ಸೋರಿಕೆ ಇದೆಯಾ ಅಥವಾ ಇಂಜಿನ್ ಸೈಡ್ ಅಲ್ಲಿ ಏನಾದ್ರೂ ರಬ್ಬರ್ ಏನಾದ್ರೂ ಸೀಲಿಂಗ್ ಹೋಗಿದೆಯಾ ಅನ್ನೋದನ್ನ ಮುಖ್ಯವಾಗಿ ಚೆಕ್ ಮಾಡ್ಕೊಳ್ಳಿ.
ಇನ್ನು ಟೈಯರ್ಸ್ ನಿಮಗೆ ಎಲ್ಲೆಲ್ಲೂ ಇದು ಎಲ್ಲಾ ಕಾಸ್ಟ್ಲಿ ಬೀಳುತ್ತೆ.
ಇನ್ನು ನಾಲ್ಕು ಟೈಯರ್ ಗಳು ಸಮನಾಗಿರಬೇಕು, ಒಂದು ಕಡೆ ಏನಾದ್ರೂ ಉಜ್ಜಿರೋದು ಅಥವಾ ಸವೆದಿರೋದು ಏನಾದ್ರೂ ಇತ್ತು ಅಂತ ಅಂದ್ರೆ ಒಂದು ಅಲೈನ್ಮೆಂಟ್ ಪ್ರಾಬ್ಲಮ್ ಇರಬಹುದು ಅಥವಾ ಟೈಯರ್ ಹಾಳಾಗಿದೆ ಅಂತ ತಿಳ್ಕೊಂಡುಬಿಡಿ.
ಇನ್ನು ಮುಖ್ಯವಾಗಿ ಟೆಸ್ಟ್ ಡ್ರೈವ್ ಮಾಡಿ.
ಯಾವ ರೀತಿ ಟೆಸ್ಟ್ ಡ್ರೈವ್ ಮಾಡಬೇಕು.
ಆ ಕೆಲಸ ಮಾಡ್ಬೇಡಿ, ಏನಂತ ಅಂದ್ರೆ ಮ್ಯೂಸಿಕ್ ಸಿಸ್ಟಮ್ ನ ಗಾಡಿನ ಆನ್ ಮಾಡ್ಕೊಂಡು ಗಾಡಿ ಓಡಿಸೋದು.
ಇದರಿಂದ ನಿಮಗೆ ಎಲ್ಲಿ ಟಕ್ ಟಕ್ ಟಕ್ ಅಂತ ಸೌಂಡ್ ಬರ್ತಾ ಇದೆ, ಸಸ್ಪೆನ್ಷನ್ ಸೌಂಡ್ ಇದೆಯಾ, ಇಂಜಿನ್ ನಾಯ್ಸ್ ಇದೆಯಾ ಏನು ಗೊತ್ತಾಗಲ್ಲ.
ಅದರಿಂದ ನೀವೇನಾದ್ರೂ ನೀವೇನಾದ್ರೂ ಗಾಡಿ ತಗೊಳ್ಳೋಕು ಮುಂಚೆ ಇದು ಆದಷ್ಟು ನೀವು ಮ್ಯೂಸಿಕ್ ಸಿಸ್ಟಮ್ ನ ಆಫ್ ಮಾಡಿ ನಿಮ್ಮ ಗಾಡಿಯನ್ನು ಓಡಿಸಿದ್ರೆ ಎಲ್ಲಿ ಸೌಂಡ್ ಬರ್ತಾ ಇದೆ ಅನ್ನೋದು ಕ್ಲೀನ್ ಆಗಿ ಕಂಡುಹಿಡಿದುಕೊಳ್ಳಬಹುದು, ಇದರಿಂದ ನಿಮಗೆ ಮೇಜರ್ ಲಾಸ್ ಕಡಿಮೆ ಆಗುತ್ತೆ.
ಪ್ರಮುಖ ವಿಷಯ: ಎಷ್ಟೋ ಜನಕ್ಕೆ ಈ ಕನ್ಫ್ಯೂಷನ್ ಇರುತ್ತೆ ಏನು ಅಂದ್ರೆ ಓಡೋಮೀಟರ್ ಮತ್ತೆ ಸರ್ವಿಸ್ ಹಿಸ್ಟರಿಯನ್ನು ತಗೊಳ್ಳೋದು ಹೇಗೆ ಅಂತ ಗೊತ್ತಿರೋದಿಲ್ಲ, ಓಡೋಮೀಟರ್ ರೀಡಿಂಗ್ ಕಡಿಮೆ ತೋರಿಸಿದಾಗ ಕೆಲವರು ಕಾಮನ್ ಆಗಿ ಗಾಡಿ ಕಡಿಮೆ ಹೋಗಿರಬಹುದೇನೋ ಅಂತ ಅನ್ಕೊಳ್ತೀರಿ.
ಬಟ್ ಒಂದು ಲಕ್ಷ ಕಿಲೋಮೀಟರ್ ಓಡಿರುವ ಗಾಡಿ 40,000ಕ್ಕೆ ಇಳಿಸಿಬಿಡ್ತಾರೆ ಬಿಕಾಸ್ ಮೋಸಾ ಮಾಡೋರು ಸುಮಾರು ಜನ ಇರ್ತಾರೆ.
ಬಟ್ ಇದಕ್ಕೆ ಸೊಲ್ಯೂಷನ್ ಏನಪ್ಪಾ ಅಂತ ಅಂದ್ರೆ ಕಾರ್ ಯಾವ ಕಂಪನಿಯದ್ದು ಫಾರ್ ಎಕ್ಸಾಂಪಲ್ ಒಂದು ಟೊಯೋಟಾನೋ, ಮಾರುತಿನೋ, ಹುಂಡೈನೋ ಯಾವುದಾದರೂ ಗಾಡಿ ಆಗಿದ್ರೂ ಕೂಡ ಆ ಶೋರೂಮ್ ಗೆ ಹೋಗಿ ಗಾಡಿ ನಂಬರ್ ಅನ್ನ ಕೊಟ್ಟರೆ ಅದರ ಕಂಪ್ಲೀಟ್ ಸರ್ವಿಸ್ ಹಿಸ್ಟರಿಯನ್ನು ಕೊಡ್ತಾರೆ.
ಮುಂಚೆ ಏನಾದ್ರೂ ಆಕ್ಸಿಡೆಂಟ್ ಆಗಿತ್ತಾ ಇಲ್ವಾ ಅಥವಾ ಲಾಸ್ಟ್ ಓಡೋಮೀಟರ್ ಎಷ್ಟು ಓಡಿತ್ತು, ಕಿಲೋಮೀಟರ್ ಎಷ್ಟು ಓಡಿತ್ತು ಅನ್ನೋದನ್ನು ಕಂಪ್ಲೀಟ್ ಡೀಟೇಲ್ಸ್ ಅವರು ಕೊಡ್ತಾರೆ, ಅಲ್ಲಿ ಕೊನೆ ಬಾರಿ ನಿಮಗೆ ಸರ್ವಿಸ್ ಆಗಿದ್ದು ಎಷ್ಟು ಕಿಲೋಮೀಟರ್ ಅಂತ ನಿಮಗೆ ಅಲ್ಲಿ ಗೊತ್ತಾಗುತ್ತೆ.
ಪ್ಲಸ್ ಏನಾದರೂ ಮೇಜರ್ ಆಕ್ಸಿಡೆಂಟ್ ಗಳಾಗಿ ಮೇಜರ್ ಏನಾದರೂ ಪಾರ್ಟ್ಸ್ ಏನಾದರೂ ಚೇಂಜ್ ಮಾಡಿದ್ರೆ ಅದು ಕಂಪ್ಲೀಟ್ ನಿಮಗೆ ಡೀಟೇಲ್ಸ್ ಗೊತ್ತಾಗುತ್ತೆ.
ಜೊತೆಗೆ ಕಾರ್ ವ್ಯಾಲ್ಯೂ ನಿರ್ಧಾರ ಮಾಡೋದು ಹೇಗೆ ಸರ್? ಹೇಗೆ ಗೊತ್ತಾಗುತ್ತೆ ನಮಗೆ ಇದು ಅಂತ ಅಂದ್ರೆ.
ಮಾರಾಟಗಾರರು ಹೇಳಿದ ಬೆಲೆಯನ್ನು ಯಾವತ್ತೂ ಕೂಡ ಒಪ್ಪಿಕೊಳ್ಳೋಕೆ ಹೋಗ್ಬೇಡಿ ಬಿಕಾಸ್ ಡಿಪೆಂಡ್ ಇರುತ್ತಲ್ಲ ಒಂದು ಮಾಡೆಲ್ ಮೇಲೆ ಆಗಿರಬಹುದು ಒಂದು ಓನರ್ಶಿಪ್ ಮೇಲೆ ಆಗಿರಬಹುದು ತುಂಬಾ ಕಡಿಮೆ ಇರುತ್ತೆ.
ಅದಕ್ಕೆ ಓಬಿವಿ (ಆರೆಂಜ್ ಬುಕ್ ವ್ಯಾಲ್ಯೂ) ಅಂತ ಒಂದು ವೆಬ್ಸೈಟ್ ಇರುತ್ತೆ, ನೀವು ಅಲ್ಲಿ ಆ ವೆಬ್ಸೈಟ್ ಗೆ ಹೋಗಿ ನಿಮ್ಮ ಕಾರ್ ನ ಮಾಡೆಲ್ ಎಷ್ಟು ವರ್ಷದ್ದು, ಎಷ್ಟು ಕಿಲೋಮೀಟರ್ ಓಡಿದೆ ಆ ರೀತಿಯಾಗಿ ಎಲ್ಲಾ ಡೀಟೇಲ್ಸ್ ಅನ್ನು ಕೊಟ್ಟರೆ ಮಾರುಕಟ್ಟೆಯಲ್ಲಿ ಎಷ್ಟು ಬೆಲೆ ಇದೆ ಅಂತ ಕಂಪ್ಲೀಟ್ ಆಗಿ ನಿಮಗೆ ಇಲ್ಲಿ ತೋರಿಸಿಕೊಡುತ್ತೆ.
ಅಷ್ಟೇ ಯಾಕೆ ನೆಗೋಷಿಯೇಷನ್ ಇಸ್ ಮೋಸ್ಟ್ ಇಂಪಾರ್ಟೆಂಟ್.
ಗಾಡಿಯಲ್ಲಿರುವ ಸಣ್ಣ ಪುಟ್ಟ ಲೋಪಗಳು ಟೈಯರ್ಸ್ ಸವೆದಿದೆ ಅಂತ ಆಗಿರಬಹುದು ಅಥವಾ ಗಾಡಿ ಏನಾದ್ರೂ ತೊಂದರೆ ಆಗಿರಬಹುದು ಅಂದ್ರೆ ಆದಷ್ಟು ಕಡಿಮೆ ಮಾಡೋಕೆ ಟ್ರೈ ಮಾಡಿ ಪ್ರೈಸ್ ಗಳಲ್ಲಿ.
ಮುಕ್ತಾಯ (Conclusion):
ಸ್ನೇಹಿತರೇ, ಹೊಸ ಕಾರ್ ಕೊಳ್ಳುವುದಕ್ಕಿಂತ ಸೆಕೆಂಡ್ ಹ್ಯಾಂಡ್ ಕಾರ್ ಖರೀದಿಸುವುದು ಬಜೆಟ್ ದೃಷ್ಟಿಯಿಂದ ಒಳ್ಳೆಯ ನಿರ್ಧಾರವೇ. ಆದರೆ ಆತುರಪಟ್ಟು ಅಥವಾ ಕೇವಲ ಹೊರಗಿನ ಮೆರುಗು (Paint) ನೋಡಿ ಹಣ ಚೆಲ್ಲಬೇಡಿ. ಮೇಲೆ ತಿಳಿಸಿದಂತೆ ಕಾರಿನ ಪೇಪರ್‌ಗಳು (RC, Insurance, NOC, Fine), ಏಪ್ರಾನ್ ಚೆಕಿಂಗ್, ಡೋರ್ ಬಿಡ್ಡಿಂಗ್ ಮತ್ತು ಕೋಲ್ಡ್ ಸ್ಟಾರ್ಟ್ ಮಾಡಿ ಇಂಜಿನ್ ಕಂಡೀಷನ್ ಅನ್ನು ಕಡ್ಡಾಯವಾಗಿ ಪರೀಕ್ಷಿಸಿ.
ನಿಮಗೇನಾದರೂ ಗಾಡಿಯ ತಾಂತ್ರಿಕ ವಿಷಯಗಳ ಬಗ್ಗೆ ಅನುಮಾನವಿದ್ದರೆ, ನಿಮ್ಮ ಜೊತೆ ಒಬ್ಬ ನಂಬಿಕಸ್ಥ ಮೆಕಾನಿಕ್ ಕರೆದುಕೊಂಡು ಹೋಗಿ ಟೆಸ್ಟ್ ಡ್ರೈವ್ ಮಾಡಿಸುವುದು ಇನ್ನೂ ಉತ್ತಮ. ಜಾಣತನದ ಪರಿಶೀಲನೆ ನಿಮ್ಮ ಕಷ್ಟದ ಹಣವನ್ನು ವ್ಯರ್ಥವಾಗದಂತೆ ಉಳಿಸುತ್ತದೆ!
ನಿಮಗೇನಾದರೂ ಸೆಕೆಂಡ್ ಹ್ಯಾಂಡ್ ಕಾರುಗಳ ಬಗ್ಗೆ ಅನುಮಾನಗಳಿದ್ದರೆ ಕೆಳಗೆ ಕಮೆಂಟ್ ಮಾಡಿ ತಿಳಿಸಿ, ಹಾಗೆಯೇ ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ!
check :https://kannadacarguide.in/about-us/
Thank you for visiting KannadaCarGuide.in ❤️
